ನ್ಯೂಯಾರ್ಕ್: ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ಅದರ ನಾಲ್ವರು ಪತ್ರಕರ್ತರ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 15 ಬಿಲಿಯನ್ ಡಾಲರ್ (₹1.32 ಲಕ್ಷ ಕೋಟಿ) ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಫ್ಲೋರಿಡಾದ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಿರುವ ದಾವೆಯಲ್ಲಿ, 2024ರ ಚುನಾವಣೆಗೂ ಮುನ್ನ ಟ್ರಂಪ್ ವಿರುದ್ಧ ಬರೆದ ಕೆಲ ಲೇಖನಗಳು ಹಾಗೂ ನ್ಯೂಯಾರ್ಕ್ ಟೈಮ್ಸ್ನ ಇಬ್ಬರು ಪತ್ರಕರ್ತರು ಬರೆದ ಒಂದು ಪುಸ್ತಕವನ್ನು ಹೆಸರಿಸಲಾಗಿದೆ.

‘ನ್ಯೂಯಾರ್ಕ್ ಟೈಮ್ಸ್ ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುವ ಮೂಲಕ ಮಾನಹಾನಿ ಉಂಟು ಮಾಡಿದೆ. ಇದು ಎಡಪಂಥೀಯ ಡೆಮಾಕ್ರಟಿಕ್ ಪಕ್ಷದ ಮುಖವಾಣಿಯಾಗಿದೆ’ ಎಂದು ಟ್ರಂಪ್ ‘ಟ್ರೂಥ್’ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಕುರಿತು ನ್ಯೂಯಾರ್ಕ್ ಟೈಮ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಉದ್ಯಮಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಟ್ರಂಪ್ ಅವರಿಗೆ ಸಂಪರ್ಕ ಇತ್ತು’ ಎಂದು ವರದಿ ಪ್ರಕಟಿಸಿದ್ದ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಹಾಗೂ ಮಾಧ್ಯಮ ಕ್ಷೇತ್ರದ ದೈತ್ಯ ರೂಪರ್ಟ್ ಮುರ್ಡೋಕ್ ವಿರುದ್ಧ ಟ್ರಂಪ್ ಅವರು ಕಳೆದ ಜುಲೈನಲ್ಲಿ 10 ಬಿಲಿಯನ್ ಡಾಲರ್ (ಸುಮಾರು ₹86,187 ಕೋಟಿ) ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.