ಬೋಸ್ಟನ್: ತೃತೀಯ ಲಿಂಗಿಗಳಿಗೆ ಹಾಗೂ ಲಿಂಗ ಗುರುತನ್ನು ಘೋಷಿಸಲು ಒಪ್ಪದವರಿಗೆ ಅವರ ಲಿಂಗ ಗುರುತನ್ನು ಪ್ರತಿಬಿಂಬಿಸುವ ಪಾಸ್ಪೋರ್ಟ್ ನಿರಾಕರಿಸುವ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಯು ಅಸಂವಿಧಾನಿಕವಾಗಬಹುದು ಎಂದು ಫೆಡರಲ್ ನ್ಯಾಯಾಧೀಶರು ಹೇಳಿದ್ದಾರೆ. ಆದರೆ ದೇಶದಾದ್ಯಂತ ಈ ನಿಯಮಕ್ಕೆ ತಡೆ ನೀಡಲು ನಿರಾಕರಿಸಿದ್ದಾರೆ.
.ಇಟಲಿ ಪ್ರಧಾನಿ ಮೆಲೋನಿ ಜತೆ ಟ್ರಂಪ್ ದ್ವಿಪಕ್ಷೀಯ ಮಾತುಕತೆ.
ಟ್ರಂಪ್ ಆಡಳಿತದ ಈ ನಿರ್ಧಾರ ಪ್ರಶ್ನಿಸಿ ಏಳು ಮಂದಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಪೈಕಿ ಆರು ಮಂದಿಯ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಈ ನಿಯಮವನ್ನು ಅವರಿಗೆ ಅನ್ವಯಿಸಕೂಡದು ಎಂದು ಬೋಸ್ಟನ್ ಜಿಲ್ಲಾ ನ್ಯಾಯಾಧೀಶೆ ಜೂಲಿಯಾ ಕೊಬಿಕ್ ಮಧ್ಯಂತರ ತಡೆ ನೀಡಿದ್ದಾರೆ.

ಟ್ರಂಪ್ ಅವರ ಈ ನಿರ್ಧಾರ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಲ್ಲದೆ, ತೃತೀಯ ಲಿಂಗಿ ಅಮೆರಿಕನ್ನರ ಮೇಲೆ ದ್ವೇಷ ಉತ್ತೇಜಿಸುವಂತೆ ಮಾಡುತ್ತದೆ. ಅದು ಅಮೆರಿಕದ ಸಂವಿಧಾನದ ಐದನೇ ತಿದ್ದುಪಡಿಯಿಂದ ರಕ್ಷಿಸಲ್ಪಟ್ಟ ಸಮಾನ ರಕ್ಷಣೆಯ ತತ್ವಗಳನ್ನು ಉಲ್ಲಂಘಿಸಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
.ಗಡೀಪಾರು ಆದೇಶ ತಡೆ ಉಲ್ಲಂಘನೆ: ಟ್ರಂಪ್ ಆಡಳಿತದ ವಿರುದ್ಧ ನ್ಯಾಯಾಂಗ ನಿಂದನೆ?.
ಪಾಸ್ಪೋರ್ಟ್ ನೀತಿಯು ತೃತೀಯ ಲಿಂಗಿಗಳ ಬಗ್ಗೆ ಪೂರ್ವಗ್ರಹಗಳಿಂದ ಕೂಡಿದೆ, ಹೀಗಾಗಿ ಎಲ್ಲಾ ಅಮೆರಿಕನ್ನರಿಗೆ ಸಮಾನ ಅವಕಾಶ ನೀಡುವ ಸಂವಿಧಾನದ ಬದ್ಧತೆಯನ್ನು ಉಲ್ಲಂಘಿಸುತ್ತದೆ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ಮನವಿ ಮಾಡಿದ ಆರು ಮಂದಿಯ ಪಾಸ್ಪೋರ್ಟ್ನಲ್ಲಿ ಲೈಂಗಿಕ ಪದನಾಮ ಬದಲಿಸಲು ಅವಕಾಶ ನೀಡಬೇಕು, ಅಥವಾ ‘X’ ಎಂದು ನಮೂದಿಸಬೇಕು ಎಂದು ವಿದೇಶಾಂಗ ಇಲಾಖೆಗೆ ಅವರು ಸೂಚಿಸಿದ್ದಾರೆ.
.ಅಕ್ರಮ ವಲಸಿಗರು ಸ್ವಯಂ ದೇಶ ಬಿಟ್ಟರೆ ಉಚಿತ ವಿಮಾನ ಟಿಕೆಟ್, ಹಣ: ಟ್ರಂಪ್ ‘ಆಫರ್’.
ಈ ಬಗ್ಗೆ ವಿದೇಶಾಂಗ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದೂರುದಾರರನ್ನು ಪ್ರತಿನಿಧಿಸುವ ಅಮೆರಿಕದ ನಾಗರಿಕ ಸ್ವಾತಂತ್ರ್ಯ ಒಕ್ಕೂಟ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕದಲ್ಲಿ ಹೆಣ್ಣು ಹಾಗೂ ಗಂಡು ಎನ್ನುವ ಎರಡು ಲಿಂಗಕ್ಕೆ ಮಾತ್ರ ಕಾನೂನು ಮಾನ್ಯತೆ ಇದೆ ಎನ್ನುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು.
.ತೆರಿಗೆ ವಿನಾಯಿತಿ ಸೌಲಭ್ಯ ರದ್ದು: ಹಾರ್ವರ್ಡ್ ವಿ.ವಿಗೆ ಟ್ರಂಪ್ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.