ವಾಷಿಂಗ್ಟನ್: ಯುದ್ಧಕಾಲದ ಕಾನೂನಿನಡಿ ವೆನಿಜುವೆಲದ ನಾಗರಿಕರನ್ನು ಗಡೀಪಾರು ಮಾಡಬಾರದು ಎನ್ನುವ ತನ್ನ ಆದೇಶವನ್ನು ಉಲ್ಲಂಘಿಸಿರುವುದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವನ್ನು ನ್ಯಾಯಾಂಗ ನಿಂದನೆಗೆ ಗುರಿಪಡಿಸಬಹುದು ಎಂದು ಅಮೆರಿಕದ ಫೆಡರಲ್ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ.
.ಅಕ್ರಮ ವಲಸಿಗರು ಸ್ವಯಂ ದೇಶ ಬಿಟ್ಟರೆ ಉಚಿತ ವಿಮಾನ ಟಿಕೆಟ್, ಹಣ: ಟ್ರಂಪ್ ‘ಆಫರ್’.
ವೆನಿಜುವೆಲಾ ಗ್ಯಾಂಗ್ ಸದಸ್ಯರೆಂದು ಆರೋಪಿಸಲಾದವರನ್ನು ಎಲ್ ಸಲ್ವಡರ್ಗೆ ಗಡೀಪಾರು ಮಾಡುವ ಆದೇಶಕ್ಕೆ ಮಾರ್ಚ್ 15ರಂದು ನೀಡಿದ ತಡೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ವಾಷಿಂಗ್ಟನ್ನ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಬೋಸ್ಬರ್ಗ್ ಹೇಳಿದ್ದಾರೆ.

ಬೋಸ್ಬರ್ಗ್ ಅವರು ಆದೇಶ ನೀಡುವ ವೇಳೆ, ವೆನಿಜುವೆಲ ನಾಗರಿಕರಿದ್ದ ಎರಡು ವಿಮಾನಗಳು ಅಮೆರಿಕದಿಂದ ಎಲ್ ಸಲ್ವಡರ್ಗೆ ಪ್ರಯಾಣಿಸುತ್ತಿತ್ತು. ಟೇಕಾಫ್ ಆಗಿರುವ ವಿಮಾನಗಳು ತಕ್ಷಣವೇ ಅಮೆರಿಕಕ್ಕೆ ಹಿಂದಿರುಗಬೇಕು ಎಂದು ಅವರು ಆದೇಶದಲ್ಲಿ ಹೇಳಿದ್ದರು. ಆದರೆ ಅದನ್ನು ಧಿಕ್ಕರಿಸಿದ್ದಕ್ಕಾಗಿ ಸರ್ಕಾರವನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಗುರಿಯಾಗಿಸಬಹುದು ಎಂದು ಅವರು ಹೇಳಿದ್ದಾರೆ.
.‘ಈಗಲೇ ದೇಶ ಬಿಡಿ’: ವಿದೇಶಿಗರಿಗೆ ಟ್ರಂಪ್ ಆಡಳಿತದ ಹೊಸ ಎಚ್ಚರಿಕೆ ಹೀಗಿದೆ...
‘ನ್ಯಾಯಾಲಯವು ಅಂತಹ ತೀರ್ಮಾನವನ್ನು (ನ್ಯಾಯಾಂಗ ನಿಂದನೆ) ಲಘುವಾಗಿ ಅಥವಾ ಆತುರದಿಂದ ತೆಗೆದುಕೊಳ್ಳುವುದಿಲ್ಲ. ಪ್ರತಿವಾದಿಗಳಿಗೆ ತಮ್ಮ ಕ್ರಿಯೆಗಳನ್ನು ಸರಿಪಡಿಸಲು ಅಥವಾ ವಿವರಿಸಲು ಸಾಕಷ್ಟು ಅವಕಾಶವನ್ನು ನೀಡಿದೆ. ಆದರೆ ಅವರ ಯಾವುದೇ ಪ್ರತಿಕ್ರಿಯೆಗಳು ತೃಪ್ತಿಕರವಾಗಿಲ್ಲ’ ಎಂದು ಎಂದು ಬೋಸ್ಬರ್ಗ್ ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೋರಿ ಟ್ರಂಪ್ ಆಡಳಿತವನ್ನು ಸಂಪರ್ಕಿಸಲಾಯಿತಾದರೂ ಪ್ರಯೋಜನವಾಗಿಲ್ಲ.
.ತೆರಿಗೆ ವಿನಾಯಿತಿ ಸೌಲಭ್ಯ ರದ್ದು: ಹಾರ್ವರ್ಡ್ ವಿ.ವಿಗೆ ಟ್ರಂಪ್ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.