ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣವನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. ವಾರದ ಹಿಂದಷ್ಟೇ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಉಕ್ರೇನ್ ಮೇಲಿನ ದಾಳಿಗಾಗಿ ರಷ್ಯಾವನ್ನು ಖಂಡಿಸುವುದಾಗಿಯೂ ಉಕ್ರೇನ್ ಜನರಿಗಾಗಿ ಪ್ರಾರ್ಥಿಸುವುದಾಗಿಯೂ ಟ್ರಂಪ್ ಹೇಳಿದ್ದಾರೆ. ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ ಟ್ರಂಪ್ ಅವರು ಉಕ್ರೇನ್ ಪರ ಹೇಳಿಕೆ ನೀಡಿದ್ದಾರೆ.

ಉಕ್ರೇನ್ ಪರ ಸಹಾನುಭೂತಿ ವ್ಯಕ್ತಪಡಿಸಿದ ಅವರು, ಇನ್ನೂ ಕೂಡ ಕೀವ್ನಲ್ಲಿ ಉಳಿದುಕೊಂಡಿರುವ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಧೈರ್ಯಶಾಲಿ ಎಂದು ಹೊಗಳಿದ್ದಾರೆ.

ಉಕ್ರೇನ್ನ ಅನಿಲ ಪೈಪ್ಲೈನ್ ಸ್ಫೋಟಿಸಿದ ರಷ್ಯಾ ಪಡೆಗಳು: ದುಷ್ಪರಿಣಾಮದ ಎಚ್ಚರಿಕೆ

ವಾರದ ಹಿಂದೆ ಮಾತನಾಡಿದ್ದ ಟ್ರಂಪ್, ಉಕ್ರೇನ್ನ ಪ್ರದೇಶಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪುಟಿನ್ ನಿರ್ಧಾರ ಜಾಣ್ಮೆಯಿಂದ ಕೂಡಿದ್ದು ಎಂದು ಬಣ್ಣಿಸಿದ್ದರು. ಇದು ಅವರ ರಿಪಬ್ಲಿಕನ್ ಪಕ್ಷದ ಸದಸ್ಯರನ್ನು ಮುಜುಗರಕ್ಕೀಡು ಮಾಡಿತ್ತು.

ಈ ಮಧ್ಯೆ, ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದ್ದು, ಖಾರ್ಕಿವ್ ನಗರದಲ್ಲಿ ಗ್ಯಾಸ್ ಪೈಪ್ಲೈನ್ ಸ್ಫೋಟಿಸಿವೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.