ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಧ್ಯಕ್ಷೆಯಾಗುವುದು ಅಮೆರಿಕಕ್ಕೆ ಅವಮಾನ. ಇಲ್ಲಿನ ಜನ ಅವರನ್ನು ಇಷ್ಟಪಡುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಉತ್ತರ ಕರೊಲಿನಾದಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಜೋ ಬೈಡನ್ ಗೆಲುವು ಸಾಧಿಸಿದರು ಎಂದಾದರೆ ಚೀನಾ ಗೆದ್ದಂತೆ. ವಿಶ್ವದ ಇತಿಹಾಸದಲ್ಲೇ ಶ್ರೇಷ್ಠ ಆರ್ಥಿಕತೆಯನ್ನು ಹೊಂದುವಂತಹ ಪರಿಸ್ಥಿತಿ ನಮ್ಮಲ್ಲಿ ಸೃಷ್ಟಿಸಿದ್ದೆವು. ಚೀನಾ ಪ್ಲೇಗ್ ಬಂದ ಕಾರಣ ಅದಕ್ಕೆ ಅಡ್ಡಿಯಾಯಿತು. ಆದರೆ, ಈಗ ನಾವದನ್ನು ಮರುರೂಪಿಸಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಮೆರಿಕದಲ್ಲಿ ವ್ಯವಸ್ಥಿತ ವರ್ಣಭೇದ ನೀತಿ ಇದೆ: ಕಮಲಾ ಹ್ಯಾರಿಸ್

‘ಆಕೆಯನ್ನು ಜನ (ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ) ಇಷ್ಟಪಡುತ್ತಿಲ್ಲ. ಯಾರೂ ಇಷ್ಟಪಡುತ್ತಿಲ್ಲ. ಆಕೆ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾಗುವುದು ಸಾಧ್ಯವಿಲ್ಲ. ಹಾಗಾದರೆ ಅದು ದೇಶಕ್ಕೆ ಅವಮಾನ’ ಎಂದೂ ಟ್ರಂಪ್ ಹೇಳಿದ್ದಾರೆ.

ಚೀನಾ ಮತ್ತು ದಂಗೆಕೋರರು ಜೋ ಬೈಡನ್ ಗೆಲ್ಲಬೇಕೆಂದು ಬಯಸುತ್ತಾರೆ. ಯಾಕೆಂದರೆ. ಬೈಡನ್ ನೀತಿಗಳು ಅಮೆರಿಕದ ಕುಸಿತಕ್ಕೆ ಕಾರಣವಾಗಬಹುದು ಎಂಬುದು ಅವರಿಗೆ ತಿಳಿದಿದೆ ಎಂದು ಟ್ರಂಪ್ ಹೇಳಿದ್ದಾರೆ.

ಕೊರೊನಾ ವಿರುದ್ಧದ ಹೋರಾಟಕ್ಕಾಗಿ ತಯಾರಾಗುತ್ತಿರುವ ಲಸಿಕೆಯ ಪರಿಣಾಮಕಾರಿ ಗುಣ ಮತ್ತು ವಿಶ್ವಾಸಾರ್ಹತೆ ಕುರಿತು ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಮಂಗಳವಾರ ಖಂಡಿಸಿದ್ದ ಟ್ರಂಪ್, ‘ಇಂಥವರೆಂದೂ ಅಧ್ಯಕ್ಷರಾಗಲು ಸಾಧ್ಯವಿಲ್ಲ‘ ಎಂದು ಗುಡುಗಿದ್ದರು.

ಇದನ್ನೂ ಓದಿ:ಕಮಲಾ ಹ್ಯಾರಿಸ್ ಅಧ್ಯಕ್ಷರಾಗಲು ಸಾಧ್ಯವಿಲ್ಲ: ಡೊನಾಲ್ಡ್ ಟ್ರಂಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.