ವಾಷಿಂಗ್ಟನ್:ಸುಪ್ರೀಂ ಕೋರ್ಟ್ ನ್ಯಾಯಮೂರ್ತಿರುತ್ ಬೇಡರ್ ಗಿನ್ಸ್‌ಬರ್ಗ್ ನಿಧನದಿಂದಾಗಿತೆರವಾಗಿರುವ ಸ್ಥಾನಕ್ಕೆ ಮಹಿಳೆಯೊಬ್ಬರನ್ನುನಾಮನಿರ್ದೇಶನ ಮಾಡುವ ಇಂಗಿತವನ್ನುಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದರು.

ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಟ್ರಂಪ್, ‘ನ್ಯಾಯಮೂರ್ತಿ ಸ್ಥಾನಕ್ಕೆ ಮುಂದಿನ ವಾರ ನಾಮನಿರ್ದೇಶನ ಮಾಡಲಿದ್ದೇನೆ' ಬಹುಶಃ ಅವರು ಮಹಿಳೆಯೇ ಆಗಿರುತ್ತಾರೆ' ಎಂದರು.

87 ವರ್ಷದ ಗಿನ್ಸ್ ಬರ್ಗ್ ಅವರು ಶುಕ್ರವಾರ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಇವರು, ಸುಪ್ರೀಂ ಕೋರ್ಟ್ ಉನ್ನತ ಸ್ಥಾನ ಅಲಂಕರಿಸಿದ್ದ ದ್ವಿತೀಯ ಮಹಿಳೆಯಾಗಿದ್ದರು.

ಈ ವೇಳೆ ಟ್ರಂಪ್ ಅವರು ಸಭಿಕರಿಗೆ ನ್ಯಾಯಮೂರ್ತಿ ಯಾರು ನಾಮನಿರ್ದೇಶನಗೊಳ್ಳಬೇಕು. ಮಹಿಳೆಯೇ ಅಥವಾ ಪುರುಷನೇ ಎಂದು ಪ್ರಶ್ನಿಸಿದರು. ಇದಕ್ಕೆ ಮಹಿಳೆ ಎಂಬ ಉತ್ತರ ವ್ಯಕ್ತವಾಯಿತು.

ಟ್ರಂಪ್ ಇದಕ್ಕೆ, ‘ಇದು ಜನರಿಂದ ಸಿಕ್ಕ ನಿಖರ ಉತ್ತರವಾಗಿದೆ. ನಾನು ಕೂಡಾ ಆ ಸ್ಥಾನದಲ್ಲಿ ಒಬ್ಬ ಬುದ್ಧಿಶಾಲಿ ಮಹಿಳೆ ಇರಬೇಕು ಎಂದೇಬಯಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.