ವಾಷಿಂಗ್ಟನ್: ದೇಶದ ಭದ್ರತಾ ನಿಯಮಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಪುನರ್ಪರಿಶೀಲನೆ ನಡೆಸಲಿದ್ದು, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ಸೇರಿ ಹಲವು ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಈ ಬಗ್ಗೆ ಮಾಹಿತಿ ಇರುವ ಮೂವರು ತಿಳಿಸಿದ್ದಾರೆ.
.ಸುಂಕ ಸಮರ: ಭಾರತಕ್ಕೂ ಬಿಸಿ, ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ.
ಈ ಪಟ್ಟಿಯಲ್ಲಿ ಬೇರೆ ದೇಶಗಳ ಹೆಸರೂ ಇದ್ದು, ಅವು ಯಾವುದೆಂದು ತಿಳಿದಿಲ್ಲ ಎಂದು ತಮ್ಮ ಹೆಸರನ್ನು ಬಹಿರಂಗಪಡಿಸಕೂಡದು ಎನ್ನುವ ಷರತ್ತಿನೊಂದಿಗೆ ಆವರು ಮಾಹಿತಿ ನೀಡಿದ್ದಾರೆ.

ಟ್ರಂಪ್ ಅವರು ತಮ್ಮ ಹಿಂದಿನ ಆಡಳಿತಾವಧಿಯಲ್ಲಿ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನೀಷೇಧ ಹೇರಿದ್ದರು. ಇದನ್ನು 2021ರಲ್ಲಿ ಜೋ ಬೈಡನ್ ಅವರು ಹಿಂಪಡೆದಿದ್ದರು. ಟ್ರಂಪ್ ಅವರ ಆ ನಿರ್ಧಾರ ‘ನಮ್ಮ ರಾಷ್ಟ್ರೀಯ ಆತ್ಮಸಾಕ್ಷಿಯ ಮೇಲಿರುವ ಕಳಂಕ’ ಎಂದು ಕಿಡಿಕಾರಿದ್ದರು.

ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ, ವಿಶೇಷ ವಲಸೆ ವಿಸಾ, ಹಾಗೂ ನಿರಾಶ್ರಿತರಾಗಿ ಅಮೆರಿಕದಲ್ಲಿ ಆಶ್ರಯ ಪಡೆದಿರುವ ಸಾವಿರಾರು ಅಘ್ಗನ್ ಮೂಲದವರಿಗೆ ಸಮಸ್ಯೆಯಾಗಲಿದೆ.
.ಟ್ರಂಪ್ ಜತೆಗಿನ ಸಂಘರ್ಷ: ವಿಷಾದ ವ್ಯಕ್ತಪಡಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ.
‘ಸಂಪೂರ್ಣ ನಿಷೇಧ ಹೇರುವ ಪಟ್ಟಿಯಲ್ಲಿ ಅಫ್ಗಾನಿಸ್ತಾನದ ಹೆಸರು ಇದ್ದು, ಪಾಕಿಸ್ತಾನ ಹೆಸರನ್ನೂ ಶಿಫಾರಸು ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಈ ನಿಯಮವನ್ನು ಜಾರಿ ಮಾಡುವ ನ್ಯಾಯ ಮತ್ತು ಹೋಂ ಲ್ಯಾಂಡ್ ಭದ್ರತೆ, ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯನ್ನು ಈ ಬಗ್ಗೆ ಮಾಹಿತಿ ಬಯಸಿ ಸಂಪರ್ಕಿಸಲಾಯಿತಾದರೂ, ಅವರಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.
.ಭಾರತ, ಚೀನಾ ಮೇಲೆ ಪ್ರತಿ ಸುಂಕ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ.
ಅಮೆರಿಕದಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆದಿರುವ ಹಾಗೂ ವಿಶೇಷ ವಿಸಾದಲ್ಲಿ ಇರುವ ಅಫ್ಗನ್ನರನ್ನು ತೀವ್ರವಾಗಿ ತಪಾಸಣೆ ನಡೆಸಲಾಗುವುದು. ಇದು ಅಮೆರಿಕದಲ್ಲಿ ಸ್ಥಳಾಂತರಗೊಳ್ಳಲು ಕಾಯುತ್ತಿರುವ ಅಫ್ಗನ್ನರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬರದಿದ್ದರೂ, ಪ್ರಯಾಣ ನಿಷೇಧದ ಆದೇಶ ಮುಂದಿನ ವಾರ ಹೊರಬೀಳಲಿದೆ ಎಂದು ಅಮೆರಿಕ ಸರ್ಕಾರದ ಮೂಲಗಳು ತಿಳಿಸಿವೆ.
.ಟ್ರಂಪ್ – ಝೆಲೆನ್ಸ್ಕಿ ಜಟಾಪಟಿ: ಅಮೆರಿಕದ ರಿಪಬ್ಲಿಕನ್ನರ ಭಿನ್ನ ರಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.