ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ಬಾಂಬ್ ಸ್ಫೋಟ: ಕೆನ್ಯಾದ ಪೊಲೀಸ್ ಅಧಿಕಾರಿ ಸಾವು

Published 19 ಜನವರಿ 2024, 16:07 IST
Last Updated 19 ಜನವರಿ 2024, 16:07 IST
ಅಕ್ಷರ ಗಾತ್ರ

ನೈರೋಬಿ (ಎಪಿ): ಕೆನ್ಯಾ–ಸೊಮಾಲಿಯಾ ಗಡಿಯಲ್ಲಿ ಗುರುವಾರ ಬಂಡಿಯಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾದ ಕಚ್ಚಾ ಬಾಂಬ್ ಸಿಡಿದು ಕೆನ್ಯಾದ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ಅಲ್ಲದೆ, ಈ ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಎರಡು ಕತ್ತೆಗಳಿಗೆ ಕಟ್ಟಿದ್ದ ಬಂಡಿಯು ಸೊಮಾಲಿಯಾ ಚೆಕ್‌ಪಾಯಿಂಟ್‌ ಬುಲಾ ಹವಾದಿಂದ ಕೆನ್ಯಾದ ಗಡಿಯೊಳಕ್ಕೆ ಪ್ರವೇಶಿಸಿತ್ತು. ಪರಿಶೀಲನೆಗಾಗಿ ತಡೆದು ನಿಲ್ಲಿಸಿದಾಗ ಬಂಡಿ ಓಡಿಸುತ್ತಿದ್ದ ವ್ಯಕ್ತಿಯು ಕೆಳಕ್ಕೆ ಜಿಗಿದು ಸೊಮಾಲಿಯಾ ಕಡೆಗೆ ಓಡಲು ಆರಂಭಿಸಿದ್ದ. ಈ ನಡುವೆ, ಸ್ಫೋಟ ಸಂಭವಿಸಿತ್ತು ಎಂದು ಕೆನ್ಯಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. 

ಗಾಡಿ ಓಡಿಸುತ್ತಿದ್ದ ಆರೋಪಿಯನ್ನು ಸೊಮಾಲಿಯಾ ಪೊಲೀಸರು ಬಂಧಿಸಿದ್ದು, ಆತನ ವಶಕ್ಕೆ ಪಡೆಯಲು ಕೆನ್ಯಾದ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT