ನ್ಯೂಯಾರ್ಕ್: ‘ಪ್ರತಿಸುಂಕ ಹೇರಿದ ಕ್ರಮವನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸೂಚನೆ ನೀಡಿ’ ಎಂದು 12 ರಾಜ್ಯಗಳು ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ. ಕಾನೂನುಬಾಹಿರವಾದ ಈ ಕ್ರಮವು ಅಮೆರಿಕದ ಆರ್ಥಿಕತೆಯನ್ನು ಅಸ್ತವ್ಯಸ್ತ ಸ್ಥಿತಿಗೆ ತಲುಪಿಸಿದೆ ಎಂದೂ ದೂರಿವೆ.

‘ಕಾನೂನುಬದ್ಧವಾಗಿ ಉತ್ತಮ ರೀತಿಯಲ್ಲಿ ಅಧಿಕಾರ ಚಲಾಯಿಸುವುದಕ್ಕಿಂತ ಟ್ರಂಪ್ ಅವರು ತಮ್ಮ ಸ್ವಹಿತಾಸಕ್ತಿಗಾಗಿ ದೇಶದ ವ್ಯಾಪಾರ ನೀತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಸುಂಕವನ್ನು ಅಕ್ರಮ ಎಂದು ಘೋಷಿಸಿ, ಸರ್ಕಾರಿ ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ಇರುವ ಸುಂಕ ಹೇರುವ ಅಧಿಕಾರವನ್ನು ರದ್ದು ಮಾಡಿ’ ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

‘ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ’ಯಡಿ ನಾನು ಪ್ರತಿಸುಂಕ ಹೇರುವ ಕ್ರಮವನ್ನು ಕೈಗೊಳ್ಳುತ್ತಿದ್ದೇನೆ’ ಎಂದು ಟ್ರಂಪ್ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ಗೆ (ಸಂಸತ್ತು) ಮಾತ್ರವೇ ಸುಂಕವನ್ನು ಹೇರುವ ಅಧಿಕಾರವಿದೆ. ದೇಶವು ಬೆದರಿಕೆ ಎದುರಿಸುತ್ತಿದ್ದರೆ ಮಾತ್ರ ಅಧ್ಯಕ್ಷರು ಈ ಕಾಯ್ದೆಯಲ್ಲಿನ ಅಧಿಕಾರ ಬಳಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.