ದುಬೈ: ಕೆಲ ದಶಕಗಳ ಹಿಂದೆ ಇರಾನ್ ಅಳುತ್ತಿದ್ದ ರಾಜ ಮೊಹಮ್ಮದ್ ರೆಝಾ ಪಹ್ಲವಿ ಅವರನ್ನು ಅಧಿಕಾರದಿಂದ ಕಿತ್ತೊಗೆದಿದ್ದ ಆಯತೊಲ್ಲಾ ರುಹೊಲ್ಲಾ ಖೊಮೇನಿ, ತೈಲ ಸಮೃದ್ಧ ರಾಷ್ಟ್ರದ ಆಡಳಿತನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.

ಹರಿತವಾದ ಮಾತುಗಾರಿಕೆ ಹಾಗೂ ಆ ಭಾಗದ ವರ್ಚಸ್ಚಿ ನಾಯಕರಾಗಿದ್ದ ಖೊಮೇನಿ 1989ರಲ್ಲಿ ಮರಣ ಹೊಂದಿದ ಬಳಿಕ, ಅಯತೊಲ್ಲಾ ಖಮೇನಿ ಇರಾನ್ನ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಇರಾನ್ಅನ್ನು ಕೊಲ್ಲಿಯಲ್ಲಿಯೇ ‘ಶಕ್ತಿಕೇಂದ್ರ’ವನ್ನಾಗಿ ರೂಪಿಸಿದ್ದರು.

ಖೊಮೇನಿ ಅವರಿಗಿಂತ ಹೆಚ್ಚು ಅವಧಿಗೆ ಇರಾನ್ ಆಳಿದ್ದ ಖಮೇನಿ, ತಮ್ಮ ಅಧಿಕಾರಾವಧಿಯಲ್ಲಿ ಇಸ್ರೇಲ್ ಹಾಗೂ ಅಮೆರಿಕದೊಂದಿಗೆ ವೈರತ್ವ ಕಟ್ಟಿಕೊಂಡಿದ್ದರು. ಖಮೇನಿ ಕೈಗೊಂಡಿದ್ದ ಅಣ್ವಸ್ತ್ರ ಕಾರ್ಯಕ್ರಮ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ಅದನ್ನು ತಡೆಯುವಂತೆ ನಿರ್ಬಂಧ ಹೇರಿದ್ದ ಅಮೆರಿಕ, ಕಳೆದ ವರ್ಷ ಅದರ ಮೇಲೆ ವೈಮಾನಿಕ ದಾಳಿಯನ್ನೂ ಮಾಡಿತ್ತು.

ಈಗ, ಇಸ್ರೇಲ್ ಹಾಗೂ ಅಮೆರಿಕ ಪಡೆಗಳು ನಡೆಸಿದ ಭೀಕರ ದಾಳಿಯಲ್ಲಿ 86 ವರ್ಷದ ಖಮೇನಿ ಹತರಾಗುವ ಮೂಲಕ ಸುಮಾರು ಮೂರು ದಶಕಕ್ಕೂ ಹೆಚ್ಚು ಅವಧಿಯ ಅವರ ‘ದೇವಪ್ರಭುತ್ವ’ ಅಂತ್ಯಗೊಂಡಿದೆ.

ಅವರ ಗೌರವಾರ್ಥ ಸರ್ಕಾರವು 40 ದಿನಗಳ ಶೋಕಾಚರಣೆ ಹಾಗೂ 7 ದಿನ ರಜೆ ಘೋಷಿಸಿದೆ.

ಶಿಯಾ ಮುಸ್ಲಿಮರೇ ಇರಾನ್ ಮುನ್ನಡೆಸಬೇಕು ಎಂಬುದು ಖೊಮೇನಿ ಅಪೇಕ್ಷೆಯಾಗಿತ್ತು. ಅದನ್ನು ಖಮೇನಿ ಸಾಕಾರಗೊಳಿಸಿದ್ದರು. ಖಮೇನಿ ಸ್ಥಾಪಿಸಿದ್ದ ಅರೆಸೇನಾ ಪಡೆ ‘ಇರಾನ್ ರೆವಲ್ಯೂಷನರಿ ಗಾರ್ಡ್ಸ್’(ಐಆರ್ಜಿಸಿ) ಅವರ ಆಡಳಿತಕ್ಕೆ ಬಲ ತುಂಬಿತ್ತು.

ಇಸ್ಲಾಮಿಕ್ ಆಡಳಿತ ಜಾರಿಗೆ ಖಮೇನಿ ಒತ್ತು ನೀಡಿದ್ದರು. ಇದಕ್ಕೆ ಭಾರಿ ಪ್ರತಿರೋಧವೂ ವ್ಯಕ್ತವಾಗಿತ್ತು. ಅದರಲ್ಲೂ, ಹೆಡ್ಸ್ಕಾರ್ಫ್ಅನ್ನು ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ 2022ರಲ್ಲಿ ಮಹ್ಸಾ ಅಮಿನಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದರು. ಕಸ್ಟಡಿಯಲ್ಲಿದ್ದಾಗಲೇ ಆಕೆ ಮೃತಪಟ್ಟಿದ್ದಳು. ಈ ಸಾವು ದೇಶದಾದ್ಯಂತ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಸಾವಿರಾರು ಜನರು ಬೀದಿಗಳಿದು ಖಮೇನಿ ವಿರುದ್ಧ ಪ್ರತಿಭಟಿಸಿದ್ದರು.

ಪ್ರತಿಭಟನಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದರಿಂದ ನೂರಾರು ಜನರು ಮೃತಪಟ್ಟಿದ್ದು ಈಗ ಇತಿಹಾಸ.

ಈಗ ಖಮೇನಿ ಹತ್ಯೆಯಾಗಿದ್ದು ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆದಿದೆ. ಕಟ್ಟಾ ಧಾರ್ಮಿಕವಾದಿಗಳನ್ನು ಒಳಗೊಂಡ. 88 ಸದಸ್ಯ ಬಲದ ‘ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್’ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.