ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕ ಇಳಿಸುವ ‘ವೆಗೋವಿ’ ಔಷಧಕ್ಕೆ ಸಮ್ಮತಿ ಸಾಧ್ಯತೆ

Published 22 ಜನವರಿ 2024, 15:16 IST
Last Updated 22 ಜನವರಿ 2024, 15:16 IST
ಅಕ್ಷರ ಗಾತ್ರ

ಫ್ರಾಂಕ್‌ಫರ್ಟ್‌: ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆಗೊಳಿಸಲು ನೋವೊ ನಾರ್ಡಿಸ್ಕ್‌ ಕಂಪನಿಯ ‘ವೆಗೋವಿ’ ಔಷಧ ಬಳಕೆಗೆ ಯುರೋಪಿಯನ್‌ ಒಕ್ಕೂಟದ ಔಷಧ ನಿಯಂತ್ರಕವು ಈ ವಾರ ಅನುಮತಿ ನೀಡುವ ಸಾಧ್ಯತೆ ಇದೆ.

ನೋವೊ ನಾರ್ಡಿಸ್ಕ್‌ ಡ್ಯಾನಿಷ್‌ ಕಂಪನಿಯಾಗಿದ್ದು, ಅದರ ‘ವೆಗೋವಿ’ ಅನ್ನು ತೂಕ ಇಳಿಸುವ ಔಷಧವಾಗಿ ಬಳಸಲಾಗುತ್ತಿದೆ. ಕಂಪನಿಯ ಈ ಔಷಧವಷ್ಟೇ ಅಲ್ಲದೆ ಮಧುಮೇಹ ಔಷಧ ‘ಒಜೆಂಪಿಕ್‌’ಗೆ ಹೆಚ್ಚಿನ ಬೇಡಿಕೆಯಿದ್ದು, ಇವುಗಳಿಂದ ಕಳೆದ ಎರಡು ವರ್ಷಗಳಲ್ಲಿ ಕಂಪನಿಯ ಷೇರು ಮೌಲ್ಯ ದ್ವಿಗುಣಗೊಂಡಿದೆ.

ಸ್ಥೂಲಕಾಯ ಹೊಂದಿರುವ ರೋಗಿಗಳ ತೂಕವನ್ನು ಶೇ 15ರಷ್ಟು ಇಳಿಸಲು ‘ವೆಗೋವಿ’ ನೆರವಾಗುತ್ತಿದೆ. ಅಲ್ಲದೆ ಅದು ಹೃದಯಾಘಾತ, ಪಾರ್ಶ್ವವಾಯು ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಆಗುವ ಸಾವಿನ ಸಂಭವವನ್ನು ಶೇ 20ರಷ್ಟು ಕಡಿಮೆಗೊಳಿಸುತ್ತದೆ ಎಂಬುದು ಪ್ರಯೋಗಗಳಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT