ವಾಷಿಂಗ್ಟನ್: ‘ಟೆಹರಾನ್ನಲ್ಲಿರುವ ನಿವಾಸಿಗಳು ತಕ್ಷಣವೇ ತೆರವುಗೊಳಿಸಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭೀತಿ ಹುಟ್ಟಿಸುವ ಸಂದೇಶ ಪ್ರಕಟಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ, ಈ ವರದಿಯನ್ನು ತಳ್ಳಿ ಹಾಕಿದ ಅವರು, ಯುದ್ಧ ಕೊನೆಗೊಳಿಸಲು ವಾಷಿಂಗ್ಟನ್ಗೆ ಮರಳುತ್ತಿದ್ದೇನೆ’ ಎಂದು ಹೇಳಿದರು.

ಇರಾನ್ ಮೇಲೆ ಇಸ್ರೇಲ್ ವಾಯುದಾಳಿಯು ಮಂಗಳವಾರಕ್ಕೆ ಮತ್ತಷ್ಟು ತೀವ್ರಗೊಂಡಿದ್ದು, ವಾಯುದಾಳಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ತಕ್ಷಣವೇ ಖಾಲಿಮಾಡಬೇಕು ಎಂದು ಸಂದೇಶ ಹಾಕಲಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ಇರಾನ್ನ ನಿವಾಸಿಗಳು ಮಂಗಳವಾರ ಬೆಳಿಗ್ಗೆ ಅಂಗಡಿ, ಐತಿಹಾಸಿಕ ಗ್ರ್ಯಾಂಡ್ ಬಜಾರ್ ಮುಚ್ಚಿ ನಗರ ಬಿಟ್ಟು ಹೊರಡಲು ಅನುವಾದರು. ಆದರೆ, ತೆರವುಗೊಳಿಸಲು ಯಾವುದೇ ಸಂದೇಶ ನೀಡಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಇರಾನ್ನ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಟೆಹರಾನ್ ತೆರವು: ಮಂಗಳವಾರ ಬೆಳಿಗ್ಗೆ ಸೂರ್ಯೋದಯವಾಗುತ್ತಿದ್ದಂತೆಯೇ, ಟೆಹರಾನ್ ಪಟ್ಟಣವು ಖಾಲಿ ಹೊಡೆಯಲಾರಂಭಿಸಿತು. ರಾಜಧಾನಿಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಕೋವಿಡ್ ಸಮಯದಲ್ಲಿ ನಗರದಲ್ಲಿ ಉಂಟಾದ ಖಾಲಿ ರಸ್ತೆಗಳನ್ನು ನೆನಪಿಸುವಂತಿತ್ತು.

ಬಹುಪಾಲು ಜನರು ಕ್ಯಾಸ್ಪಿಯನ್ ಸಮುದ್ರ ತೀರದತ್ತ ತೆರಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಟೆಹರಾನ್ ಒಂದರಲ್ಲೇ 1 ಕೋಟಿ ಜನರು ನೆಲಸಿದ್ದಾರೆ. ಇದು ಇಡೀ ಇಸ್ರೇಲ್ನಲ್ಲಿ ವಾಸಿಸುವ ಜನಸಂಖ್ಯೆಗೆ ಸಮವಾಗಿದೆ.

ಸಂಘರ್ಷ ಕೊನೆಗೊಳಿಸಲು ಮನವಿ: ‘ಇಸ್ರೇಲ್–ಇರಾನ್ ನಡುವಿನ ಸಂಘರ್ಷವನ್ನು ಕೂಡಲೇ ಕೊನೆಗೊಳಿಸಬೇಕು’ ಎಂದು ಕೆನಡಾದಲ್ಲಿ ನಡೆಯುತ್ತಿರುವ ಜಿ–7 ರಾಷ್ಟ್ರಗಳ ಮುಖ್ಯಸ್ಥರು ಒತ್ತಾಯಿಸಿದ್ದಾರೆ. ಇರಾನ್ ಪರಮಾಣು ಹೊಂದುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ’ ಎಂದು ಪುನರುಚ್ಚರಿಸಿದ್ದಾರೆ.
.ಟೆಹರಾನ್: ಉಗ್ರರ ದಾಳಿಗೆ ಇಬ್ಬರು ಭದ್ರತಾ ಸಿಬ್ಬಂದಿ ಹತ್ಯೆ .ಟೆಹರಾನ್ನಲ್ಲಿ ಸುದ್ದಿವಾಹಿನಿ ಕಚೇರಿ ಮೇಲೆ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.