ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ವರ್ಷಗಳ ಬಳಿಕ ಸ್ವದೇಶಕ್ಕೆ ಬಂದಿಳಿದ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌

Published 21 ಅಕ್ಟೋಬರ್ 2023, 9:55 IST
Last Updated 21 ಅಕ್ಟೋಬರ್ 2023, 9:55 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ನಾಲ್ಕು ವರ್ಷಗಳ ಕಾಲ ಬ್ರಿಟನ್‌ನಲ್ಲಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಶನಿವಾರ ವಿಶೇಷ ವಿಮಾನದಲ್ಲಿ ತಾಯ್ನಾಡಿಗೆ ಮರಳಿದರು. 

ನೀಲಿ ಕುರ್ತಾ ಪೈಜಾಮಾ, ಕಡುಗೆಂಪು ಬಣ್ಣದ ಮಫ್ಲರ್ ಮತ್ತು ಕಪ್ಪು ಕೋಟು ಧರಿಸಿದ್ದ ಅವರು ಮಧ್ಯಾಹ್ನ 1.30ರ ವೇಳೆಗೆ ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಮುಂದಿನ ವರ್ಷದ ಜನವರಿ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪಿಎಂಎಲ್–ಎನ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಅವರು ಪ್ರಯತ್ನಿಸಲಿದ್ದಾರೆ. ಈ ಮೂಲಕ, ದೇಶದಲ್ಲಿ ನಾಲ್ಕನೇ ಅವಧಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಮುಂದಾಗಿದ್ದಾರೆ. 

ಷರೀಫ್ ಅವರನ್ನು ಭೇಟಿ ಮಾಡಿದ ಅವರ ಕಾನೂನು ತಂಡವು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಸಲ್ಲಿಸಲು ದಾಖಲಾತಿಗಳಿಗೆ ಸಹಿ ಮಾಡಿಸಿಕೊಂಡಿತು. ಜೊತೆಗೆ ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳು ಅವರ ಬಯೋಮೆಟ್ರಿಕ್ ಪಡೆದರು.

ಷರೀಫ್ ಅವರು ತಾಯ್ನಾಡಿಗೆ ಮರಳಿರುವುದು ಪಾಕಿಸ್ತಾನದಲ್ಲಿ ಹೊಸ ಭರವಸೆ ಮೂಡಿಸಿದೆ ಎಂಬುದನ್ನು ಬಿಂಬಿಸಲು ಅವರ ಪಕ್ಷ ಯತ್ನಿಸುತ್ತಿದೆ. ಷರೀಫ್ ಅವರನ್ನು ಸ್ವಾಗತಿಸಲು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರಲಿಲ್ಲ. ಆದಾಗ್ಯೂ, ನೂರಾರು ಮಂದಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. 

ದುಬೈ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರಸ್ತುತ ಪಾಕಿಸ್ತಾನ ಎದುರಿಸುತ್ತಿರುವ ಹಣಕಾಸು ಬಿಕ್ಕಟ್ಟನ್ನು ಸರಿಪಡಿಸಲು ತಮ್ಮ ಪಕ್ಷ ಸಮರ್ಥವಿದೆ. ನಾನು ಪಾಕಿಸ್ತಾನವನ್ನು ಬಿಟ್ಟು ವಿದೇಶಕ್ಕೆ ಹೋಗುವಾಗ ಯಾವುದೇ ಖುಷಿ ಇರಲಿಲ್ಲ. ಆದರೆ, ಈಗ ನನಗೆ ತುಂಬಾ ಖುಷಿಯಾಗುತ್ತಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT