ಬರ್ಲಿನ್: ಜರ್ಮನಿಯಲ್ಲಿ ಬುಧವಾರ ದಾಖಲೆ ಸಂಖ್ಯೆಯಲ್ಲಿ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಹೇಳಿದೆ.

‘ನಾವೀಗ ಲಸಿಕಾ ಅಭಿಯಾನವನ್ನು ತ್ವರಿತವಾಗಿ ವೇಗಗೊಳಿಸದಿದ್ದರೆ ಮತ್ತೊಮ್ಮೆ ಲಾಕ್‌ಡೌನ್ ಮಾಡುವ ಅಗತ್ಯ ಎದುರಾಗಬಹುದು. ತ್ವರಿತವಾಗಿ ಲಸಿಕೆ ಹಾಕದಿದ್ದರೆ ಒಂದು ಲಕ್ಷದಷ್ಟು ಜನರು ಸಾವಿಗೀಡಾಗಬಹುದು’ ಎಂದು ಬರ್ಲಿನ್‌ನ ಚಾರಿಟ್ ಆಸ್ಪತ್ರೆಯ ವೈರಾಲಜಿ ವಿಭಾಗದ ಮುಖ್ಯಸ್ಥ ಕ್ರಿಶ್ಚಿಯನ್ ಡ್ರೊಸ್ಟೆನ್ ಅವರು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ದೇಶದಾದ್ಯಂತ ಒಟ್ಟು 37,120 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಸಂಖ್ಯೆ ಬುಧವಾರದ ವೇಳೆಗೆ 39,676ಕ್ಕೆ ಏರಿಕೆ ಕಂಡಿದೆ. 7 ದಿನಗಳಲ್ಲಿ ಪ್ರತಿ ಲಕ್ಷ ಮಂದಿಗೆ ಹೊಸ ಸೋಂಕಿನ ಪ್ರಕರಣಗಳ ಪ್ರಮಾಣವು 232.1 ಅಗಿದೆ ಎಂದು ಅಲ್ಲಿನ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.