ಸಿಡ್ನಿ: ಮಾಧ್ಯಮ ಕ್ಷೇತ್ರದ ದೈತ್ಯ ಸಂಸ್ಥೆಗಳಾದ ರೂಪರ್ಟ್ ಮರ್ಡೋಕ್ ಒಡೆತನದ ನ್ಯೂಸ್ ಕಾರ್ಪ್ ಮತ್ತು ಗೂಗಲ್ ನಡುವಣ ಸಂಘರ್ಷ ತಾರಕಕ್ಕೇರಿದೆ.

ಆಸ್ಟ್ರೇಲಿಯಾದಲ್ಲಿನ ಗೂಗಲ್ ಕಂಪನಿಯನ್ನು ವಿಭಜಿಸಬೇಕು ಎಂದು ನ್ಯೂಸ್ ಕಾರ್ಪ್ ಪ್ರತಿಪಾದಿಸಿದೆ. ಆನ್‌ಲೈನ್ ಸರ್ಚ್ ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಗೂಗಲ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಮೂಲಕ, ಗ್ರಾಹಕರಿಗೆ, ಜಾಹೀರಾತುದಾರರಿಗೆ ಮತ್ತು ಪ್ರಕಾಶಕರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದೆ.

ಈ ಬಗ್ಗೆ ಆಸ್ಟ್ರೇಲಿಯಾದ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ. ಕಳೆದ ವಾರ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವ ಎಲಿಜೆಬೆತ್ ವಾರ್ರೆನ್ ಸಹ ಅಮೆಜಾನ್, ಗೂಗಲ್, ಫೇಸ್‌ಬುಕ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಈ ಮೂರು ಕಂಪನಿಗಳೇ ಸಮಾಜದಲ್ಲಿ ತಮ್ಮ ಹಿಡಿತ ಸಾಧಿಸುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ನ್ಯೂಸ್ ಕಾರ್ಪ್ ಈಗ ಎಲೆಜೆಬೆತ್ ಅವರ ವಾದವನ್ನೇ ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿದೆ. ಷೇರು ವಿಕ್ರಯ ಗಂಭೀರವಾದ ಕ್ರಮ. ಆದರೆ, ಗೂಗಲ್ ವಿಷಯದಲ್ಲಿ ಇದು ಅಗತ್ಯವಾಗಿದೆ ಎಂದು ಹೇಳಿದೆ.

ನ್ಯೂಸ್ ಕಾರ್ಪ್ ಆಸ್ಟ್ರೇಲಿಯಾ ಕಂಪನಿಯು ಬ್ರಿಟನ್‌ನ ನ್ಯೂಸ್ ಕಾರ್ಪ್ ಅಂಗ ಸಂಸ್ಥೆಯಾಗಿದ್ದು, ವಾಲ್‌ಸ್ಟ್ರೀಟ್ ಜರ್ನಲ್, ಫಾಕ್ಸ್ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳನ್ನು ಹಲವು ದೇಶಗಳಲ್ಲಿ ಇದು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.