ಪೋರ್ಟ್ ಹೌ ಪ್ರಿನ್ಸ್ : ಪೋರ್ಟ್ ಔ ಪ್ರಿನ್ಸ್ನ ಸಾರ್ವಜನಿಕ ಆಸ್ಪತ್ರೆಯೊಂದರ ಮೇಲೆ ಮಂಗಳವಾರ ದಾಳಿ ನಡೆದಿದೆ. ಪರಿಣಾಮ, ಇಬ್ಬರು ಪತ್ರಕರ್ತರು ಮೃತಪಟ್ಟಿದ್ದು, ಹಲವರಿಗೆ ಗಾಯ ಆಗಿದೆ ಎಂದು ಹೈಟಿಯ ಆನ್ಲೈನ್ ಮಾಧ್ಯಮ ಸಂಘಟನೆ ತಿಳಿಸಿದೆ.

ಪೋರ್ಟ್ ಔ ಪ್ರಿನ್ಸ್ನ ಶೇ 85ರಷ್ಟು ಭಾಗವನ್ನು ಬಂಡುಕೋರರ ಗುಂಪು (ಸ್ಟ್ರೀಟ್ ಗ್ರೂಪ್) ವಶಪಡಿಸಿಕೊಂಡಿದ್ದು, 2024ರ ಆರಂಭದಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಮುಚ್ಚುವಂತೆ ಒತ್ತಾಯಿಸಿದ್ದವು. ಅಧಿಕಾರಿಗಳು ಆಸ್ಪತ್ರೆಯ ಸೇವೆಗಳನ್ನು ಪುನರ್ ಆರಂಭಿಸುವ ಕುರಿತು ಮಂಗಳವಾರ ಮಾಹಿತಿ ನೀಡುತ್ತಿದ್ದು, ಅದನ್ನು ವರದಿ ಮಾಡಲು ಸೇರಿದ್ದ ಪತ್ರಕರ್ತರ ಮೇಲೆ ಶಂಕಿತ ಗುಂಪೊಂದರ ಸದಸ್ಯರು ದಾಳಿ ನಡೆಸಿದ್ದಾರೆ.

‘ದಾಳಿಯಿಂದ ಹೆಚ್ಚಿನ ಸಂಖ್ಯೆಯ ವರದಿಗಾರರು ಗಾಯಗೊಂಡಿದ್ದಾರೆ. ದಾಳಿಗೆ ವಿವ್ ಅನ್ಸಮ್ ಒಕ್ಕೂಟ ಕಾರಣ’ ಎಂದು ಆನ್ಲೈನ್ ಮೀಡಿಯಾ ಕಲೆಕ್ಟಿವ್ನ ವಕ್ತಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.