ಕೈರೊ: ಯುದ್ಧ ಅಂತ್ಯಕ್ಕೆ ಸಮಗ್ರ ಒಪ್ಪಂದಕ್ಕೆ ಹಮಾಸ್ ಬಂಡುಕೋರರು ಮುಂದಾಗಿದ್ದು, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಜೈಲಿನಲ್ಲಿರುವ ಪ್ಯಾಲೆಸ್ಟೀನಿಗಳನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದೆ. ಅಲ್ಲದೆ ಇಸ್ರೇಲ್ನ ಮಧ್ಯಂತರ ಕದನ ವಿರಾಮ ಪ್ರಸ್ತಾಪವನ್ನು ತಿರಸ್ಕರಿಸಿದೆ.
.ಗಾಜಾ, ಲೆಬನಾನ್, ಸಿರಿಯಾದಲ್ಲಿ ಅನಿರ್ದಿಷ್ಟಾವಧಿವರೆಗೆ ಸೇನೆ: ಇಸ್ರೇಲ್ ಸಚಿವ.
ನಾವು ಮಧ್ಯಂತರ ಕದನ ವಿರಾಮಕ್ಕೆ ಒಪ್ಪುವುದಿಲ್ಲ ಎಂದು ಬಂಡುಕೋರ ಸಂಘಟನೆಯ ಮಾತುಕತೆ ತಂಡದ ಮುಖ್ಯಸ್ಥ ಖಲೀಲ್ ಅಲ್ ಹಯ್ಯಾ ಅವರು ಟಿ.ವಿ ಭಾಷಣದಲ್ಲಿ ಹೇಳಿದ್ದಾರೆ.

ಯುದ್ಧ ಕೊನೆಗೊಳಿಸಲು, ಇಸ್ರೇಲ್ ಜೈಲಿನಲ್ಲಿರುವ ಪ್ಯಾಲೆಸ್ಟೀನಿಯನ್ನರ ಬಿಡುಗಡೆ ಮಾಡಬೇಕು. ಗಾಜಾದ ಪುನರ್ನಿರ್ಮಾಣಕ್ಕೆ ಪ್ರತಿಯಾಗಿ ತನ್ನ ವಶದಲ್ಲಿರುವ ಉಳಿದ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಸಮಗ್ರ ಮಾತುಕತೆಗೆ ತಕ್ಷಣದಿಂದಲೇ ಸಿದ್ಧವಿದೆ ಎಂದು ಹಯ್ಯಾ ಹೇಳಿದ್ದಾರೆ.
.ಇಸ್ರೇಲ್ ಸೇನೆ ಜೊತೆ ಒಪ್ಪಂದ: ಮೈಕ್ರೊಸಾಫ್ಟ್ 50ನೇ ವರ್ಷಾಚರಣೆಗೆ ಪ್ರತಿಭಟನೆ ಬಿಸಿ.
ನೆತನ್ಯಾಹು ಮತ್ತು ಅವರ ಸರ್ಕಾರವು ತಮ್ಮ ರಾಜಕೀಯ ಕಾರ್ಯಸೂಚಿಗಾಗಿ ತಾತ್ಕಾಲಿಕ ಕದನ ವಿರಾಮದ ಒಪ್ಪಂದಗಳನ್ನು ಬಳಸುತ್ತದೆ. ಎಲ್ಲಾ ಒತ್ತೆಯಾಳುಗಳನ್ನು ಬಲಿ ಪಡೆದುಕೊಂಡಾದರೂ ಸರಿಯೇ ಈ ಯುದ್ಧವನ್ನು ಮುಂದುವರಿಸಬೇಕು ಎಂದು ಎನ್ನುವುದು ಅವರ ಬಯಕೆ. ಆದರೆ ನಾವು ಅದರ ಭಾಗವಾಗುವುದಿಲ್ಲ ಎಂದು ಹಯ್ಯಾ ಹೇಳಿದ್ದಾರೆ.
.ಗಾಜಾಪಟ್ಟಿ: ವಿಶಾಲ ಪ್ರದೇಶ ವಶಕ್ಕೆ ಇಸ್ರೇಲ್ ಕಾರ್ಯಾಚರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.