ಢಾಕಾ: ಪ್ರಸ್ತುತ ಭಾರತದಲ್ಲಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ನೀಡಿದ ‘ಪ್ರಚೋದನಕಾರಿ ಹೇಳಿಕೆ’ಗಳ ಬಗ್ಗೆ ಬಾಂಗ್ಲಾದೇಶದ ವಿದೇಶಾಂಗ ಕಚೇರಿಯು ಗಂಭೀರ ಕಳವಳ ವ್ಯಕ್ತಪಡಿಸಿ, ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರಿಗೆ ಸಮನ್ಸ್ ನೀಡಿದೆ.

ಇದಾಗಿ ಗಂಟೆಗಳ ನಂತರ ಹೇಳಿಕೆ ನೀಡಿರುವ ಪ್ರಣಯ್ ಅವರು, ‘ಬಾಂಗ್ಲಾದೊಂದಿಗಿನ ಭಾರತದ ಸಂಬಂಧಗಳು ಅಲ್ಪಕಾಲಿಕವಲ್ಲ, ಬದಲಾಗಿ ಶಾಶ್ವತ’ ಎಂದು ಭಾನುವಾರ ಹೇಳಿದ್ದಾರೆ.

ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾದ ‘ಇತಿಹಾಸ್ ಒ ಒಯಿಟ್ಟಿಜ್ಜೋ ಪರಿಷತ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಣಯ್ ಅವರು, ‘ಭಾರತ–ಬಾಂಗ್ಲಾ ಸಂಬಂಧ ಶಾಶ್ವತವಾಗಿದ್ದು, ಅದು ರಕ್ತ ಮತ್ತು ತ್ಯಾಗದಲ್ಲಿ ಬೆಸೆದುಕೊಂಡಿದೆ. ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

‘1971ರ ವಿಮೋಚನಾ ಯುದ್ಧದ ಸಮಯದಲ್ಲಿ ಭಾರತವು ಬಾಂಗ್ಲಾದ ಜನರೊಂದಿಗೆ ನಿಂತಿತು. ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ರಾಷ್ಟ್ರದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಅವರಿಗೆ ಬೆಂಬಲ ನೀಡುವುದು ಭಾರತ ಮುಂದುವರಿಸುತ್ತದೆ’ ಎಂದು ಪ್ರಣಯ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.