ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚುತ್ತಿರುವ ಅವಧಿಪೂರ್ವ ಜನನ ಪ್ರಮಾಣ

ಅಮೆರಿಕದ ಅಧ್ಯಯನ ವರದಿಯಲ್ಲಿ ಉಲ್ಲೇಖ
Published : 10 ಮೇ 2023, 13:07 IST
Last Updated : 10 ಮೇ 2023, 13:07 IST
ಫಾಲೋ ಮಾಡಿ
Comments

ಕೇಪ್‌ಟೌನ್‌ (ಪಿಟಿಐ): 2020ರಲ್ಲಿ ಅಂದಾಜು 1.34 ಕೋಟಿ ಶಿಶುಗಳು ಅವಧಿಗೆ ಮೊದಲೇ ಜನಿಸಿದ್ದು, ಈ ಪೈಕಿ ಶೇ 45ರಷ್ಟು ಮಕ್ಕಳು ಭಾರತ, ಚೀನಾ, ಪಾಕಿಸ್ತಾನ, ನೈಜೀರಿಯಾ ಮತ್ತು ಇಥಿಯೋಪಿಯಾದಲ್ಲಿ ಜನಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್‌ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

46 ದೇಶಗಳ 140ಕ್ಕೂ ಹೆಚ್ಚು ಸ್ವಯಂಸೇವಕರು ‘ಬಾರ್ನ್‌ ಟೂ ಸೂನ್‌: ಡಿಕೇಡ್ ಆಫ್‌ ಆ್ಯಕ್ಷನ್‌ ಆನ್‌ ಪ್ರಿಟರ್ಮ್‌ ಬರ್ತ್‌’ ಎಂಬ ಶೀರ್ಷಿಕೆಯಡಿ ವರದಿ ಸಿದ್ಧಪಡಿಸಿದ್ದು, ಅದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಯುನೈಟೆಡ್‌ ನೇಷನ್ಸ್‌ ಚಿಲ್ಡ್ರನ್‌ ಫಂಡ್‌ (ಯುನಿಸೆಫ್‌) ಜೊತೆಗೆ ಮಹಿಳೆಯರು, ಮಕ್ಕಳು ಮತ್ತು ಯುವಕರಿಗಾಗಿ ಇರುವ ವಿಶ್ವದ ಅತಿದೊಡ್ಡ ಒಕ್ಕೂಟವಾದ ಪಿಎಂಎನ್‌ಸಿಎಚ್‌ಗೆ ಕಳುಹಿಸಿದ್ದಾರೆ.

2010ರಲ್ಲಿ ಶೇ 9.8ರಷ್ಟು ಇದ್ದ ಜಾಗತಿಕ ಪ್ರಸವಪೂರ್ವ ಜನನ ಪ್ರಮಾಣವು 2020ರಲ್ಲಿ ಶೇ 9.9 ರಷ್ಟಾಗಿದೆ. ಅಂದಾಜು 1 ಕೋಟಿ 34 ಲಕ್ಷ ಶಿಶುಗಳು 2020ರಲ್ಲಿ ಅವಧಿಗೂ ಮೊದಲೇ ಜನಿಸಿವೆ. ಸುಮಾರು 10 ಲಕ್ಷ ಶಿಶುಗಳು ಪ್ರಸವಪೂರ್ವ ತೊಡಕುಗಳಿಂದ ಸಾಯುತ್ತಿವೆ. ಅಂದರೆ, ವಿಶ್ವದಾದ್ಯಂತ 10ರಲ್ಲಿ ಒಂದು ಮಗು 37 ವಾರಗಳ ಗರ್ಭಾವಧಿಗಿಂತ ಮೊದಲೇ ಜನಿಸುತ್ತಿದೆ ಎನ್ನಲಾಗಿದೆ.

2020ರಲ್ಲಿ ಬಾಂಗ್ಲಾದೇಶದಲ್ಲಿ ಅತಿಹೆಚ್ಚು ಶೇ 16.2ರಷ್ಟು ಅವಧಿಪೂರ್ವ ಜನನ ಪ್ರಮಾಣವಿದ್ದರೆ, ಮಲಾವಿಯಲ್ಲಿ ಶೇ 14.5ರಷ್ಟು, ಪಾಕಿಸ್ತಾನದಲ್ಲಿ ಶೇ 14.4ರಷ್ಟು ಇತ್ತು. ಅಭಿವೃದ್ಧಿ ಹೊಂದಿದ ದೇಶಗಳಾದ ಗ್ರೀಸ್‌ನಲ್ಲಿ ಶೇ 11.6, ಅಮೆರಿಕದಲ್ಲಿ ಶೇ 10ರಷ್ಟು ಇದೆ ಎಂದು ವರದಿ ತಿಳಿಸಿದೆ.

ಹವಾಮಾನ ಬದಲಾವಣೆ, ವಾಯುಮಾಲಿನ್ಯ, ಕೋವಿಡ್‌ ಬಿಕ್ಕಟ್ಟು, ಹೆಚ್ಚುತ್ತಿರುವ ಒತ್ತಡ ಇತ್ಯಾದಿಗಳಿಂದಾಗಿ ಅವಧಿಪೂರ್ವ ಜನನ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT