ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಭಾರತೀಯ ಪತ್ರಕರ್ತನ ಬಂಧನ

Last Updated 3 ಮೇ 2019, 2:52 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದಲ್ಲಿ ಭಾರತೀಯ ಮೂಲದ ಪತ್ರಕರ್ತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ವರದಿಗಾರಿಕೆಗೆ ತೆರಳಿದ್ದ ರಾಯಿಟರ್ಸ್‌ ಸುದ್ದಿ ಸಂಸ್ಥೆಯ ಪತ್ರಕರ್ತ ಸಿದ್ದಿಕಿ ಅಹಮ್ಮದ್ ಡ್ಯಾನಿಶ್‌,ಇಲ್ಲಿನ ನೆಗೊಂಬೊ ಪ‍ಟ್ಟಣದಲ್ಲಿನಿರಾಶ್ರಿತರು ತಂಗಿದ್ದ ಶಾಲೆಯಲ್ಲಿ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಪರಿಣಾಮ ಪೊಲೀಸರುಬಂಧಿಸಿದ್ದಾರೆ.

ಈಸ್ಟರ್ ಭಾನುವಾರದಂದು ಸೆಂಟ್ ಸಬಾಸ್ಟಿಯನ್‌ ಚರ್ಚ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಆತನ ಪೋಷಕರುನೆಗೊಂಬೊ ಪಟ್ಟಣದ ಶಾಲೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಅವರನ್ನು ಮಾತನಾಡಿಸುವ ಸಲುವಾಗಿ ಶಾಲೆಯೊಳಗೆ ಅಕ್ರಮವಾಗಿ ಹೋಗಲು ಯತ್ನಿಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಂಧಿತ ಸಿದ್ದಿಕಿ ಅಹಮ್ಮದ್ ಡ್ಯಾನಿಶ್‌ನನ್ನುಪೊಲೀಸರು ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಅವರನ್ನು ಮೇ 15ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪತ್ರಕರ್ತಸಿದ್ದಿಕಿ ಅಹಮ್ಮದ್ ಡ್ಯಾನಿಶ್‌ ದೆಹಲಿ ಮೂಲದವರು ಎಂದು ತಿಳಿದು ಬಂದಿದೆ.

ಈಸ್ಟರ್ ಭಾನುವಾರದಂದು ಸೆಂಟ್ ಸಬಾಸ್ಟಿಯನ್‌ ಚರ್ಚ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ 250 ಜನರು ಮೃತಪಟ್ಟು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT