ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸುಂಕಗಳ ರಾಜ: ಡೊನಾಲ್ಡ್ ಟ್ರಂಪ್ ಆರೋಪ

Last Updated 4 ಏಪ್ರಿಲ್ 2019, 15:14 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದವಸ್ತುಗಳಿಗೆ ಅತ್ಯಧಿಕ ಸುಂಕ ವಿಧಿಸುವ ದೇಶಗಳಲ್ಲಿ ಭಾರತವೂ ಒಂದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ್ದಾರೆ.

ನ್ಯಾಷನಲ್ ರಿಪಬ್ಲಿಕನ್ ಕಾಂಗ್ರೆಸ್ ಸಮಿತಿಯ ವಾರ್ಷಿಕ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹಾರ್ಲೆ-ಡೇವಿಡ್ಸನ್ ದ್ವಿಚಕ್ರವಾಹನಗಳೂ ಸೇರಿದಂತೆಅಮೆರಿಕ ತಯಾರಿಸುವ ವಸ್ತುಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುವ ಮೂಲಕ ಭಾರತ ಅತಿ ಹೆಚ್ಚು ಸುಂಕ ವಿಧಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಈ ವರ್ಷದ ಆರಂಭದಲ್ಲಿ ಶ್ವೇತ ಭವನದಲ್ಲಿಮಾತನಾಡಿದ್ದ ಟ್ರಂಪ್, ವಿದೇಶಿ ವಿನಿಮಯ ತೆರಿಗೆಗೆ ಉತ್ತೇಜನ ವ್ಯಕ್ತಪಡಿಸಿ ಹಾರ್ಲೆ ಡೇವಿಡ್ಸನ್ ವಾಹನಗಳ ಮೇಲಿನ ತೆರಿಗೆಯನ್ನು ಶೇ.100ರಿಂದ ಶೇ.50ಕ್ಕೆ ಇಳಿಕೆ ಮಾಡುವುದಾಗಿ ಭಾರತ ಹೇಳಿದೆ. ಇದು ಸಾಕಾಗದು, ಆದರೂ ಪರವಾಗಿಲ್ಲ ಎಂದು ಹೇಳಿದ್ದರು.

ಈ ಬಾರಿ ಮತ್ತೊಮ್ಮೆ ಭಾರತದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಟ್ರಂಪ್ ಭಾರತವನ್ನು 'ಸುಂಕಗಳ ರಾಜ' ಎಂದು ಕೆರದಿದ್ದಾರೆ.

'ನನಗೆ ಭಾರತದ ಪ್ರಧಾನಿಯವರಿಂದ ಕರೆ ಬಂದಿತ್ತು. ಅವರ ದೇಶ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸುಂಕ ವಿಧಿಸುವ ದೇಶ, ಅವರು ಅಮೆರಿಕದಉತ್ಪನ್ನಗಳಿಗೆ ಶೇ.100ರಷ್ಟು ಸುಂಕ ವಿಧಿಸುತ್ತಾರೆ. ಅವರು ಕೂಡ ನಮ್ಮಂತೆಯೇ ಮೋಟಾರ್ ಸೈಕಲ್, ಸೈಕಲ್‌ಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತಾರೆ. ಆದರೆ, ನಾವು ಮಾತ್ರ ಅವರ ಉತ್ಪನ್ನಗಳಿಗೆ ಯಾವುದೇ ಸುಂಕ ವಿಧಿಸುವುದಿಲ್ಲ. ಇದು ಸರಿಯಾದ ಕ್ರಮವಲ್ಲ, ನಾವು ಬೇರೆ ದೇಶಗಳ ವಸ್ತುಗಳ ಮೇಲೆ ಯಾವುದೇ ಸುಂಕ ವಿಧಿಸುವುದಿಲ್ಲ. ಆದರೆ, ಅವರು ನಮ್ಮ ವಸ್ತುಗಳ ಮೇಲೆ ಅತ್ಯಧಿಕ ಸುಂಕವಿಧಿಸುತ್ತಾರೆ. ಈ ವಿಚಾರವಾಗಿಮತ್ತೊಂದು ದೇಶ ಚೀನಾ ಜೊತೆ ವ್ಯಾಪಾರ ಸಂಬಂಧ ಮಾತುಕತೆ ನಡೆಯುತ್ತಿದೆ' ಎಂದು ಹೇಳುವ ಮೂಲಕ ತಾನು ಜಾರಿಗೆ ತಂದಿರುವ ತೆರಿಗೆ ನೀತಿಗಳ ಕುರಿತು ವಿವರಿಸುತ್ತಾ ಭಾರತದ ತೆರಿಗೆ ವ್ಯವಸ್ಥೆ ಕುರಿತು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಚೀನಾ ಕುರಿತು ಮಾತನಾಡಿದ ಟ್ರಂಪ್, ನನ್ನಪ್ರಕಾರ ನಾವು ಮಾಡುತ್ತಿರುವುದು ಸರಿಯಾಗಿದೆ. ಅವರಿಗೆ ನಾವು ಮಾಡಿಕೊಂಡಿರುವ ಒಪ್ಪಂದಗಳಿಗಿಂತ ಮತ್ತಷ್ಟು ನಮ್ಮಿಂದ ಬೇಕು. ಅವರಿಗೆ ಒಪ್ಪಂದ ಮಾತ್ರ ಬೇಕು. ಅಲ್ಲದೆ, ಅವರು ಅಮೆರಿಕದಿಂದ ರಫ್ತು ಮಾಡಿಕೊಳ್ಳುವ 50 ಶತಕೋಟಿ ಮೊತ್ತದ ತಂತ್ರಜ್ಞಾನದ ಮೇಲೆ ಶೇ.25ರಷ್ಟು ಸುಂಕ ತೆರಬೇಕು. ಇದರ ಜೊತೆಗೆ 200 ಶತಕೋಟಿ ಡಾಲರ್ ಮೊತ್ತದ ವಸ್ತುಗಳಿಗೆ ಶೇ.25ರಂತೆ ಸುಂಕ ತೆರಬೇಕು. ಇದು ಅವರಿಗೆ ನೋವುಂಟು ಮಾಡಿದೆ ಎಂದು ವ್ಯಂಗ್ಯವಾಡಿದರು.

'ನಮ್ಮ ಸರ್ಕಾರ ನಮ್ಮ ದೇಶದ ಕೆಲಸಗಾರರ ಹಿತಾಸಕ್ತಿಯನ್ನು ಕಾಪಾಡಲು ಯಾವುದೇ ಒಪ್ಪಂದವನ್ನು ಮುರಿಯಲು ಸಿದ್ಧವಿದೆ ಎಂದರಲ್ಲದೆ, ಚೀನಾದಿಂದ ಅಮೆರಿಕಾಗೆ ಆಗುತ್ತಿರುವದೀರ್ಘಕಾಲದ ವ್ಯಾಪಾರ ದುರ್ಬಳಕೆಯ ವಿರುದ್ಧ ಎದ್ದು ನಿಲ್ಲಬೇಕು. ಅಲ್ಲದೆ,ಬೌದ್ಧಿಕ ಕಳ್ಳತನ ಸೇರಿದಂತೆ ಹಲವು ಬಗೆಯಲ್ಲಿ ನಮಗೆ ಚೀನಾ ದ್ರೋಹ ಬಗೆದಿದೆ' ಎಂದು ದೂರಿದರು.

'ನನಗೆ ಗೊತ್ತಿಲ್ಲ. ಅದು ಹೇಗೆ ಇಷ್ಟು ವರ್ಷಗಳು ಈ ರೀತಿ ನಡೆಯಲು ನೀವು ಅವರಿಗೆ ಅವಕಾಶಕೊಟ್ಟಿರಿ, ನನಗಿಂತ ನೀವು ಇಲ್ಲಿ ಹೆಚ್ಚು ಕಾಲದಿಂದ ಇದ್ದೀರಿ. ಅವರು ನಮ್ಮ ದೇಶದಿಂದ ಹಲವು ಪ್ರಯೋಜನ ಪಡೆದುಕೊಂಡಿದ್ದಾರೆ. ನಿಮಗೆ ಗೊತ್ತಾ ನಾನು ಅವರಿಗೆ ಗೌರವ ಕೊಡುತ್ತೇನೆ. ನಾವು ಅವರಿಗೆ ಹೀಗೆ ಮಾಡುತ್ತಲೇ ಇರಬೇಕು ಎಂದು ಮಾರ್ಮಿಕವಾಗಿ ನು‍‍ಡಿಯುವ ಮೂಲಕ ತಮ್ಮ ಮಾತು ಮುಗಿಸಿದರು.

ಟ್ರಂಪ್ ಅಧಿಕಾರಕ್ಕೆ ಬಂದ ಕೂಡಲೆ ಚೀನಾದಿಂದ ಆಮದು ಮಾಡಿಕೊಳ್ಳುವ 250 ಶತಕೋಟಿ ಡಾಲರ್ ಮೌಲ್ಯದಅಲ್ಯೂಮಿನಿಯಂ ಮತ್ತು ಉಕ್ಕಿನಿಂದ ತಯಾರಿಸಿದ ವಸ್ತುಗಳ ಮೇಲೆ ಅತ್ಯಧಿಕ ಅಂದರೆ ಶೇ.25 ರಷ್ಟುಸುಂಕವಿಧಿಸಿತ್ತು.ಇದನ್ನು ಗಮನಿಸಿದ ಚೀನಾ ಅಮೆರಿಕದಿಂದ ಆಮದು ಮಾಡಿಕೊಳ್ಳುವ 110 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳ ಮೇಲೆ ಅಷ್ಟೇ ಪ್ರಮಾಣದ ಸುಂಕ ವಿಧಿಸುವ ಮೂಲಕ ತಾನೂ ಕೂಡ ಕಡಿಮೆಯೇನಿಲ್ಲ ಎಂಬುದನ್ನು ತೋರಿಸಿತು. ಇದರಿಂದಾಗಿ ಎರಡೂ ದೇಶಗಳವ್ಯಾಪಾರ ಸಂಬಂಧ ಹದಗೆಟ್ಟಿದೆ. ಈ ನಡುವೆ ಎರಡೂ ರಾಷ್ಟ್ರಗಳ ಉನ್ನತ ಮಟ್ಟದ ಅಧಿಕಾರಿಗಳುಎರಡೂ ದೇಶಗಳ ಅಧ್ಯಕ್ಷರ ನಡುವೆ ಮಾತುಕತೆ ಏರ್ಪಡಿಸಿ ಆ ಮೂಲಕ ಎರಡೂ ದೇಶಗಳ ವ್ಯಾಪಾರ ಸಂಬಂಧವನ್ನು ಉತ್ತಮಪಡಿಸಲು ಪ್ರಯತ್ನಿಸಿದರೂ ಫಲಕೊಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT