ಲಂಡನ್: ಭಾರತ ಮತ್ತು ಬ್ರಿಟನ್ ದೇಶಗಳು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಎಫ್ಟಿಎ) ಸಹಿ ಹಾಕಿವೆ. ಲಂಡನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಮ್ಮುಖದಲ್ಲಿ ಉಭಯ ದೇಶಗಳ ವಾಣಿಜ್ಯ ಸಚಿವರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಇದು ಉಭಯ ದೇಶಗಳಿಗೂ ಮಾರುಕಟ್ಟೆ ಪ್ರವೇಶವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ವಾರ್ಷಿಕವಾಗಿ ಸುಮಾರು 34 ಶತಕೋಟಿ ಡಾಲರ್ನಷ್ಟು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುತ್ತದೆ.

ಈ ಒಪ್ಪಂದದಿಂದಾಗಿ ಭಾರತವು ಶೇ 99ರಷ್ಟು ರಫ್ತಿನ ಮೇಲೆ ಸುಂಕ ರಹಿತ ಪ್ರಯೋಜನವನ್ನು ಪಡೆಯುತ್ತದೆ. ಬ್ರಿಟಿಷ್ ಸಂಸ್ಥೆಗಳು ಒಟ್ಟಾರೆ ವ್ಯಾಪಾರ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಭಾರತಕ್ಕೆ ವಿಸ್ಕಿ, ಕಾರುಗಳು ಮತ್ತು ಇತರ ಉತ್ಪನ್ನಗಳನ್ನು ಕಡಿಮೆ ಸುಂಕದಲ್ಲಿ ರಫ್ತು ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ವರ್ಷಗಳ ಮಾತುಕತೆಗಳ ನಂತರ ದೃಢೀಕರಿಸಲ್ಪಟ್ಟ ಈ ವ್ಯಾಪಾರ ಒಪ್ಪಂದವು ಎಲ್ಲ ವಲಯಗಳಲ್ಲಿ ಭಾರತೀಯ ಸರಕುಗಳಿಗೆ ಸಮಗ್ರ ಮಾರುಕಟ್ಟೆ ಪ್ರವೇಶವನ್ನು ಖಚಿತಪಡಿಸುತ್ತದೆ ಎಂದು ವರದಿ ತಿಳಿಸಿದೆ.

ಈ ಒಪ್ಪಂದ ಜಾರಿಗೆ ಬರಲು ಬ್ರಿಟನ್ ಸಂಸತ್ತಿನ ಅನುಮೋದನೆಯ ಅಗತ್ಯವಿದೆ. ಈ ಪ್ರಕ್ರಿಯೆಯು ಸುಮಾರು ಒಂದು ವರ್ಷ ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿರುವುದಾಗಿ ಮೇ 6ರಂದು ಉಭಯ ದೇಶಗಳು ಘೋಷಿಸಿದ್ದವು.

ಈ ಒಪ್ಪಂದಕ್ಕೆ ಭಾರತದ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಮತ್ತು ಬ್ರಿಟನ್ನಿನ ವಾಣಿಜ್ಯ ಸಚಿವ ಜೊನಾಥನ್ ರೆನಾಲ್ಡ್ಸ್ ಅವರು ಎರಡೂ ದೇಶಗಳ ಪ್ರಧಾನಿಗಳ ಸಮ್ಮುಖದಲ್ಲಿ ಸಹಿ ಮಾಡಿದರು.

‘ಇದು ಎರಡೂ ದೇಶಗಳ ಪಾಲಿಗೆ ಐತಿಹಾಸಿಕ ದಿನ ಎಂದು ನಾನು ಭಾವಿಸಿದ್ದೇನೆ. ಈ ದಿನ ನಿಮ್ಮನ್ನು (ಭಾರತದ ಪ್ರಧಾನಿ ನರೇಂದ್ರ ಮೋದಿ) ಸ್ವಾಗತಿಸುವುದಕ್ಕೆ ಹಾಗೂ ನಾವು ನೀಡಿದ್ದ ಭರವಸೆಯನ್ನು ಈಡೇರಿಸುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ’ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಮೋದಿ ಅವರನ್ನು ಉದ್ದೇಶಿಸಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ‘ಭಾರತ ಮತ್ತು ಬ್ರಿಟನ್ ಸಹಜ ಪಾಲುದಾರರು, ಎರಡೂ ದೇಶಗಳು ತಮ್ಮ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ಬರೆಯುತ್ತಿವೆ’ ಎಂದರು.

ಒಪ್ಪಂದ ಏರ್ಪಡುವುದಕ್ಕೂ ಮೊದಲು ಸ್ಟಾರ್ಮರ್ ಅವರು, ‘ಇದು ಬ್ರಿಟನ್ನಿನಲ್ಲಿ ಸಹಸ್ರಾರು ಉದ್ಯೋಗ ಸೃಷ್ಟಿಸಲಿದೆ, ಉದ್ಯಮ ವಲಯಕ್ಕೆ ಹೊಸ ಅವಕಾಶಗಳನ್ನು ತೆರೆಯಲಿದೆ, ಬೆಳವಣಿಗೆಗೆ ಉತ್ತೇಜನ ನೀಡಲಿದೆ’ ಎಂದರು.

ಬ್ರಿಟನ್ನಿನ ಉತ್ಪನ್ನಗಳಿಗೆ ಭಾರತದಲ್ಲಿ ವಿಧಿಸುವ ಸರಾಸರಿ ಸುಂಕದ ಪ್ರಮಾಣವು ಶೇ 15ರಷ್ಟು ಇರುವುದು ಒಪ್ಪಂದವು ಜಾರಿಗೆ ಬಂದ ನಂತರದಲ್ಲಿ ಶೇ 3ಕ್ಕೆ ಇಳಿಯಲಿದೆ ಎಂದು ಬ್ರಿಟನ್ನಿನ ವ್ಯಾಪಾರ ಮತ್ತು ಉದ್ಯಮ ಇಲಾಖೆ ಹೇಳಿದೆ. ಅಂದರೆ, ಸಾಫ್ಟ್ ಡ್ರಿಂಕ್ಸ್, ಸೌಂದರ್ಯವರ್ಧಕಗಳು, ಕಾರುಗಳು, ವೈದ್ಯಕೀಯ ಉಪಕರಣಗಳನ್ನು ಭಾರತದಲ್ಲಿ ಮಾರಾಟ ಮಾಡುವ ಬ್ರಿಟನ್ನಿನ ಕಂಪನಿಗಳಿಗೆ ಅನುಕೂಲ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.