ವಿಶ್ವಸಂಸ್ಥೆ: ಕೋವಿಡ್- 19 ಪಿಡುಗು ಕುರಿತು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಪರವಾಗಿಭಾರತ ಹಾಗೂ 168 ರಾಷ್ಟ್ರಗಳು ಮತಚಲಾಯಿಸಿವೆ.

ಆದರೆ, ಈ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಮೆರಿಕ ಹಾಗೂ ಇಸ್ರೇಲ್ ನಿರ್ಣಯದ ವಿರುದ್ಧ ಮತ ಚಲಾಯಿಸಿವೆ.

ಸಮಗ್ರ ಮತ್ತು ಸಮನ್ವಯದ ಮೂಲಕ ಕೋವಿಡ್– 19 ಪಿಡುಗಿನ ವಿರುದ್ಧ ಹೋರಾಡಬೇಕೆಂಬ ನಿರ್ಣಯವನ್ನು ಶುಕ್ರವಾರ ನಡೆದ 193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ನಿರ್ಣಯದ ಪರವಾಗಿ ಒಟ್ಟು 169 ರಾಷ್ಟ್ರಗಳು ಮತಚಲಾಯಿಸಿದವು. ಆದರೆ, ಉಕ್ರೇನ್ ಮತ್ತು ಹಂಗೇರಿ ಮತ ಚಲಾವಣೆ ಪ್ರಕ್ರಿಯೆಯಿಂದ ದೂರ ಉಳಿದವು.

ಇದನ್ನೂ ಓದಿ:Covid-19 India Update: 46 ಲಕ್ಷ ದಾಟಿದ ಸೋಂಕಿತರು, 36 ಲಕ್ಷ ಮಂದಿ ಗುಣಮುಖ

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಉಪ ಪ್ರತಿನಿಧಿ ಕೆ.ನಾಗರಾಜ್ ನಾಯ್ಡು ಅವರು, ‘ಕೋವಿಡ್– 19 ಕುರಿತು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪರ ಭಾರತ ಮತ ಚಲಾಯಿಸಿದೆ. ಇದೊಂದು ಜಾಗತಿಕ ಮಟ್ಟದ ಬಹುದೊಡ್ಡ ಸವಾಲು ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನ ಗುರುತಿಸಿದ್ದು, ಇದರ ವಿರುದ್ಧ ಹೋರಾಡಲು ಏಕತೆ, ಸಮಗ್ರತೆ ಮತ್ತು ಬಹು ಪಕ್ಷೀಯ ಸಹಕಾರ ಅಗತ್ಯ’ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.