ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಗೆಲುವಿಗಾಗಿ ಅಮೆರಿಕದಲ್ಲಿ ಹವನ

Published 30 ಏಪ್ರಿಲ್ 2024, 12:27 IST
Last Updated 30 ಏಪ್ರಿಲ್ 2024, 12:27 IST
ಅಕ್ಷರ ಗಾತ್ರ

ವಾಷಿಂಗ್ಟನ್: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ಮತ್ತೆ ಜಯ ಸಾಧಿಸಲಿ ಎಂದು ಪ್ರಾರ್ಥಿಸಿ ಬಿಜೆಪಿಯ ನೂರಾರು ಮಂದಿ ಬೆಂಬಲಿಗರು ಅಮೆರಿಕದ ವಿವಿಧ ನಗರಗಳಲ್ಲಿ ವಾರಾಂತ್ಯದಲ್ಲಿ ಹವನ ನಡೆಸಿದ್ದಾರೆ.

‘ಬಿಜೆಪಿಯ ಸಾಗರೋತ್ತರ ಸ್ನೇಹಿತರು’ ಸಂಘಟನೆಯ ಅಮೆರಿಕ ಘಟಕವು ಈ ಹವನಗಳನ್ನು ಆಯೋಜಿಸಿತ್ತು. ನ್ಯೂಜೆರ್ಸಿ, ನ್ಯೂಯಾರ್ಕ್‌, ವರ್ಜಿನಿಯಾ, ಮೇರಿಲ್ಯಾಂಡ್ ಮತ್ತು ಷಿಕಾಗೊ ನಗರಗಳಲ್ಲಿ ಭಾನುವಾರ ಹವನಗಳು ನಡೆದಿವೆ ಎಂದು ಸಂಘಟನೆಯು ಸೋಮವಾರ ತಿಳಿಸಿದೆ.

‘ಈ ಪವಿತ್ರ ಕಾರ್ಯವು ಆಧ್ಯಾತ್ಮಿಕ ಶಕ್ತಿಯನ್ನು ಆವಾಹಿಸುವ ಕೆಲಸ ಮಾಡುತ್ತದೆ. ಬಿಜೆಪಿಯು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಸಮೃದ್ಧ ಭಾರತಕ್ಕಾಗಿ ಹೊಂದಿರುವ ದೃಷ್ಟಿಕೋನಕ್ಕೆ ನಮ್ಮೆಲ್ಲರ ಬೆಂಬಲದ ದ್ಯೋತಕ ಇದು’ ಎಂದು ಸಂಘಟನೆಯು ಹೇಳಿಕೆಯಲ್ಲಿ ತಿಳಿಸಿದೆ.

ಹವನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಮೆರಿಕದಲ್ಲಿ ಇರುವ ಭಾರತ ಮೂಲದ ವೃತ್ತಿಪರರು, ಉದ್ಯಮಿಗಳು, ಷಿಕಾಗೊ ನಗರದ ನಿವಾಸಿಗಳು ನಗರದ ಹೊರವಲಯದಲ್ಲಿ ಇರುವ ದೇವಸ್ಥಾನವೊಂದರಲ್ಲಿ ಸೇರಿದ್ದರು. ವಿವಿಧೆಡೆ ಚಂಡಿ ಹೋಮ, ಗಣಪತಿ ಹೋಮ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT