ಜೆರುಸಲೇಂ: ವೆಸ್ಟ್‌ಬ್ಯಾಂಕ್‌ನ ಬೀಟ್ ಎಲ್ ಕ್ಯಾಂಪ್ ಬಳಿ ವೇಗವಾಗಿ ವಾಹನವನ್ನು ನುಗ್ಗಿಸಿ ನಡೆಸಿದ ದಾಳಿಯಲ್ಲಿ ಬಿನೈ ಮೆನಾಶೆ ಸಮುದಾಯದ, ಭಾರತ ಮೂಲದ ಇಸ್ರೇಲ್ ಯೋಧರೊಬ್ಬರು ಮೃತಪಟ್ಟಿದ್ದಾರೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಫೈರ್ ಬ್ರಿಗೇಡ್ ನಾಹ್‌ಶೊನ್ ಬೆಟಾಲಿಯನ್‌ಗೆ ಸೇರಿದ ಯೋಧ ಗೆರಿ ಗಿಡಿಯೊನ್ ಹಂಗಲ್ ಮೃತಪಟ್ಟರು ಎಂದು ಇಸ್ರೇಲ್‌ನ ಸೇನೆಯು ತಿಳಿಸಿದೆ.
ಪ್ಯಾಲೆಸ್ಟೀಯನ್ ಪರವಾನಗಿ ಹೊಂದಿದ್ದ ಲಾರಿಯನ್ನು ಅತಿ ವೇಗವಾಗಿ, ಇಸ್ರೇಲ್ ಸೇನೆಗೆ ಸೇರಿದ್ದ ರಕ್ಷಣಾ ಠಾಣೆಗೆ ನುಗ್ಗಿಸಿ ದಾಳಿ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ದಾಳಿಕೋರನನ್ನು ವೆಸ್ಟ್‌ಬ್ಯಾಂಕ್ ಕೇಂದ್ರದ ರಫಾ ನಗರದ ನಿವಾಸಿ, 58 ವರ್ಷದ ಹಯಿಲ್ ಧಾಯ್‌ಫಲ್ಹಾ ಎಂದು ಗುರುತಿಸಲಾಗಿದೆ. ಮೃತ ಯೋಧ 2020ರಲ್ಲಿ ಭಾರತದ ಈಶಾನ್ಯ ಭಾಗದಿಂದ ಇಸ್ರೇಲ್‌ಗೆ ವಲಸ ಹೋಗಿದ್ದರು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.