ನ್ಯೂಯಾರ್ಕ್: ಡೊಮಿನಿಕನ್ ರಿಪಬ್ಲಿಕ್ನಲ್ಲಿ ರಜೆ ಕಳೆಯುತ್ತಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿನಿ ಕಾಣೆಯಾಗಿದ್ದಾಳೆ. ಅಮೆರಿಕದ ಫೆಡರಲ್ ಕಾನೂನು ಜಾರಿ ಸಂಸ್ಥೆಗಳು ಕೆರಿಬಿಯನ್ ದೇಶದ ಅಧಿಕಾರಿಗಳೊಂದಿಗೆ ಆಕೆಯ ಕಣ್ಮರೆ ಪ್ರಕರಣದ ತನಿಖೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿವೆ.

ಭಾರತ ಮೂಲದ ಸುದೀಕ್ಷಾ ಕೊನಂಕಿ ಅಮೆರಿಕದ ಖಾಯಂ ನಿವಾಸಿ. ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಕೊನಂಕಿ, ಡೊಮಿನಿಕನ್ ಗಣರಾಜ್ಯದ ಪುಂಟಾ ಕಾನಾದಲ್ಲಿರುವ ರೆಸಾರ್ಟ್ನಲ್ಲಿ ಐವರು ಕಾಲೇಜು ಸ್ನೇಹಿತರೊಂದಿಗೆ ರಜೆ ಕಳೆಯುತ್ತಿದ್ದಳು ಎಂದು ಲೌಡೌನ್ ಕೌಂಟಿ ಶೆರಿಫ್ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್ 6ರಂದು ಕೊನಂಕಿ ಕಾಣೆಯಾಗಿರುವುದಾಗಿ ವರದಿಯಾಗಿದೆ. ಕೊನಂಕಿಗೆ ಏನಾಗಿರಬಹುದು ಎಂಬುದನ್ನು ಪತ್ತೆ ಮಾಡಲು ಡೊಮಿನಿಕನ್ ರಾಷ್ಟ್ರೀಯ ಪೊಲೀಸರು ಮತ್ತು ಇತರರೊಂದಿಗೆ ಅಮೆರಿಕ ಕೆಲಸ ಮಾಡುತ್ತಿದೆ.

ವರ್ಜೀನಿಯಾದ ಲೌಡೌನ್ ಕೌಂಟಿಯ ನಿವಾಸಿ ಕೊನಂಕಿ, ಪಂಟಾ ಕಾನಾದಲ್ಲಿ ಪ್ರವಾಸಕ್ಕೆ ಹೋಗಿದ್ದಾಗ ಕಾಣೆಯಾಗಿದ್ದಾರೆ. ಮಾರ್ಚ್ 6ರ ಮುಂಜಾನೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.

‘ಕೊನಂಕಿ ಪತ್ತೆಗೆ ನಡೆಯುತ್ತಿರುವ ತನಿಖೆಯಲ್ಲಿ ವ್ಯಾಪಕ ಶೋಧ ಪ್ರಯತ್ನಗಳು ಸೇರಿವೆ. ಜೊತೆಗೆ ಕಣ್ಗಾವಲು ವಿಡಿಯೊ ಮತ್ತು ದೂರವಾಣಿ ದಾಖಲೆಗಳ ಪರಿಶೀಲನೆಯೂ ನಡೆಯುತ್ತಿದೆ. ಕೊನಂಕಿ ಕಾಣೆಯಾಗುವ ಮೊದಲು ಅವರನ್ನು ಯಾರಾದರೂ ನೋಡಿದ್ದಾರಾ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಟರ್ಪೋಲ್ನಿಂದ ಯೆಲ್ಲೋ ನೋಟಿಸ್ (ಕಾಣೆಯಾದ ವ್ಯಕ್ತಿ ಕುರಿತಂತೆ ವಿಶ್ವದಾದ್ಯಂತ ಪೊಲೀಸ್ ಎಚ್ಚರಿಕೆ) ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ ಎಂದೂ ಅದು ಹೇಳಿದೆ.

ನಾಪತ್ತೆಯಾಗಿರುವ ವಿದ್ಯಾರ್ಥಿನಿ ಸಮೀಪದ ಸಾಗರದಲ್ಲಿ ಕೊಚ್ಚಿಹೋಗಿರುವ ಸಾಧ್ಯತೆ ಇದೆ ಎಂದು ತನಿಖೆ ನಡೆಸುತ್ತಿರುವ ಮೂವರು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಡಿದೆ.

ಕೊನಂಕಿ ಅವರ ಬಟ್ಟೆಗಳು ಅವರು ಕಾಣೆಯಾದ ಬೀಚ್ ಬಳಿಯ ಪೋರ್ಟಬಲ್ ಬೀಚ್ ಬೆಡ್ ಮೇಲೆ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಪೊಲೀಸರಿಗೆ ಹಿಂಸಾಚಾರದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 5ರ ರಾತ್ರಿ ನೈಟ್ಕ್ಲಬ್ಗೆ ಹೋಗಿದ್ದ ಕೊನಂಕಿ ಮತ್ತು ಅವರ ಸಂಗಡಿಗರು ಮಾರ್ಚ್ 6ರ ಬೆಳಿಗ್ಗೆ 4ಗಂಟೆಗೆ ಬೀಚ್ಗೆ ಹೋಗಿದ್ದರು ಎಂದು ಎಬಿಸಿ ನ್ಯೂಸ್ ವರದಿ ತಿಳಿಸಿದೆ. ಕೊನಂಕಿಯೊಂದಿಗೆ ತೆರಳಿದ್ದ ಇತರೆ ಯುವತಿಯರು ಮಹಿಳೆಯರು ಬೆಳಿಗ್ಗೆ 5:55ರ ಸುಮಾರಿಗೆ ತಮ್ಮ ಹೋಟೆಲ್ಗೆ ಹಿಂತಿರುಗಿರುವುದು ಭದ್ರತಾ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

‘ಒಬ್ಬ ವ್ಯಕ್ತಿ ಜೊತೆ ಕೊನಂಕಿ ಬೀಚ್ನಲ್ಲೇ ಉಳಿದುಕೊಂಡಿದ್ದರು’ಎಂದು ಡೊಮಿನಿಕನ್ ರಿಪಬ್ಲಿಕ್ ತನಿಖಾ ಪೊಲೀಸ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.