ಲಾಸ್ ವೇಗಸ್ / ನ್ಯೂಯಾರ್ಕ್: ಕಳೆದ ವಾರ ನಾಪತ್ತೆಯಾಗಿದ್ದ ಭಾರತ ಮೂಲದ 27 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಮಾಜಿ ಪ್ರಿಯಕರನೇ ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
.ವೆನೆಜುವೆಲಾ ಮೇಲೆ ಅಮೆರಿಕ ಆಕ್ರಮಣ ಖಂಡಿಸಿ ಹೊಸಪೇಟೆಯಲ್ಲಿ ಸಿಪಿಎಂ ಪ್ರತಿಭಟನೆ.
ಎಲ್ಲಿಕ್ವಾಟ್ ಸಿಟಿಯ ನಿಖಿತಾ ಗೋಡಿಶಾಲಾ ಎಂಬವರು ಜನವರಿ 2 ರಂದು ನಾಪತ್ತೆಯಾಗಿದ್ದರು. ಅವರ ಮೃತದೇಹವು ಕೊಲಂಬಿಯಾದಲ್ಲಿರುವ ಮೇರಿಲ್ಯಾಂಡ್ ಅಪಾರ್ಟ್ಮೆಂಟ್ನಲ್ಲಿ ಮಾಜಿ ಪ್ರಿಯಕರ ಅರ್ಜುನ್ ಶರ್ಮಾ (26) ಕೋಣೆಯಲ್ಲಿ ಪತ್ತೆಯಾಗಿದೆ. ಅವರ ದೇಹದಲ್ಲಿ ಇರಿದ ಗಾಯಗಳಿವೆ ಎಂದು ಹಾವರ್ಡ್ ಕೌಂಟಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಲೆ ಆರೋಪದಲ್ಲಿ ಶರ್ಮಾ ಬಂಧನಕ್ಕೆ ಪೊಲೀಸರು ವಾರೆಂಟ್ ಪಡೆದುಕೊಂಡಿದ್ದಾರೆ.

‘ಗೋಡಿಶಾಲಾ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುರುವ ಎಲ್ಲಾ ರಾಜತಾಂತ್ರಿಕ ನೆರವು ನೀಡಲಾಗುತ್ತಿದೆ. ಈ ವಿಷಯದ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ವಾಷಿಂಗ್ಟನ್ ಡಿ.ಸಿಯಲ್ಲಿರುವ ಭಾರತದ ರಾಯಭಾರ ಕಚೇರಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
.ಅಮೆರಿಕ-ವೆನೆಜುವೆಲಾ ಸಂಘರ್ಷ: ಭಾರತ ತೀವ್ರ ಕಳವಳ.
ಮೇರಿಲ್ಯಾಂಡ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಡಿಸೆಂಬರ್ 31ರಂದು ಕೊನೆಯದಾಗಿ ಗೋಡಿಶಾಲಾ ಅವರನ್ನು ನೋಡಿದ್ದೆ ಎಂದು ಅರ್ಜುನ್ ಶರ್ಮಾ ಜನವರಿ 2ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದ. ಅದೇ ದಿನ ಭಾರತಕ್ಕೆ ಪರಾರಿಯಾಗಿದ್ದಾನೆ. ಮರುದಿನ ಸರ್ಚ್ ವಾರೆಂಟ್ ಪಡೆದು ಅಪಾರ್ಟ್ಮೆಂಟ್ನಲ್ಲಿ ಪರಿಶೀಲನೆ ನಡೆಸಿದಾಗ ಗೋಡಿಶಾಲಾ ಮೃತದೇಹ ಪತ್ತೆಯಾಗಿದೆ.

ಡಿಸೆಂಬರ್ 31ರಂದು ಸಂಜೆ 7 ಗಂಟೆ ವೇಳೆಗೆ ಅರ್ಜುನ್ ಶರ್ಮಾ ಕೊಲೆ ಮಾಡಿರಬಹುದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಘಟನೆ ಹಿಂದಿನ ಕಾರಣ ತನಿಖೆಯಲ್ಲಿ ಗೊತ್ತಾಗಬೇಕಷ್ಟೇ. ಶರ್ಮಾನನ್ನು ಪತ್ತೆ ಹಚ್ಚಿ ಬಂಧಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ವೆನಿಜುವೆಲಾದಲ್ಲಿ ಅಮೆರಿಕ ಕೈಗೊಂಡ ಕ್ರಮಗಳು ಅಪಾಯಕಾರಿ: ಗುಟೆರಸ್ ಕಳವಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.