ಜಕಾರ್ತ: ಉದ್ಯಮಿ ಇಲಾನ್ ಮಸ್ಕ್ ಅವರ ಗ್ರೋಕ್ ಚಾಟ್ಬಾಟ್ಗೆ ಇಂಡೊನೇಷ್ಯಾ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿದೆ. ಕೃತಕ ಬುದ್ಧಿಮತ್ತೆ ತಂತ್ರಾಂಶ ಸೃಜಿಸುವ ಅಶ್ಲೀಲ ವಿಷಯಗಳಿಂದ ಉಂಟಾಗಬಹುದಾದ ಅಪಾಯವನ್ನು ಅರಿತು ಈ ಕ್ರಮ ಕೈಗೊಳ್ಳಲಾಗಿದೆ.

ಯುರೋಪ್ನಿಂದ ಏಷ್ಯಾವರೆಗೂ ಈ ವಿಷಯವಾಗಿ ಟೀಕೆಗಳನ್ನು ವ್ಯಕ್ತಪಡಿಸಿದ್ದರು.

ತುಂಡುಡುಗೆ ತೊಟ್ಟ ಮಕ್ಕಳ ಚಿತ್ರಗಳು ಸೇರಿದಂತೆ ಲೈಂಗಿಕ ಆಸಕ್ತಿಯ ವಿಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಸುರಕ್ಷತಾ ದೋಷಗಳನ್ನು ಸರಿಪಡಿಸಲಾಗುತ್ತಿದೆ. ಚಿತ್ರಗಳನ್ನು ಸೃಜಿಸುವ ಹಾಗೂ ಎಡಿಟ್ ಮಾಡುವ ಅವಕಾಶವನ್ನು ಚಂದಾದಾರರಿಗೆ ಮಾತ್ರವೇ ಸೀಮಿತಗೊಳಿಸುವುದಾಗಿ 'ಗ್ರೋಕ್' ಎಐ ಕಂಪನಿ xAI ತಿಳಿಸಿದೆ.

ಆದಾಗ್ಯೂ ಇಂಡೊನೇಷ್ಯಾದಲ್ಲಿ ನಿರ್ಬಂಧ ಹೇರಲಾಗಿದೆ. ಈ ಕುರಿತು ಅಲ್ಲಿನ ಸಂವಹನ ಮತ್ತು ಡಿಜಿಟಲ್ ಸಚಿವ ಮೀತ್ಯಾ ಹಫೀದ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

'ಸರ್ಕಾರದ ಅನುಮತಿ ಇಲ್ಲದೆ, ಡೀಪ್ಫೇಕ್ ತಂತ್ರಜ್ಞಾನದ ಮೂಲಕ ಅಶ್ಲೀಲ ಚಿತ್ರ, ವಿಡಿಯೊಗಳನ್ನು ರೂಪಿಸುವ ಅಭ್ಯಾಸಗಳನ್ನು ಮಾನವ ಹಕ್ಕು, ವ್ಯಕ್ತಿ ಘನತೆ ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಸುರಕ್ಷತೆಯ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುವುದು' ಎಂದು ತಿಳಿಸಿದ್ದಾರೆ.

ಈ ವಿಚಾರವಾಗಿ ಚರ್ಚಿಸುವಂತೆ X ಅಧಿಕಾರಿಗಳಿಗೂ ಸಮನ್ಸ್ ನೀಡಿದೆ.

ಗ್ರೋಕ್ ಬಳಸಿಕೊಂಡು ಕಾನೂನುಬಾಹಿರ ವಿಚಾರಗಳನ್ನು ರೂಪಿಸಲು ಯಾರಾದರೂ ಪ್ರಯತ್ನಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಸ್ಕ್ 'ಎಕ್ಸ್' ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆನ್ಲೈನ್ ಮೂಲಕ ಅಶ್ಲೀಲ ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಇಂಡೊನೇಷ್ಯಾದಲ್ಲಿ ಕಠಿಣ ನಿಯಮಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.