ದುಬೈ: ಇಂಟರ್ಪೋಲ್ನ ನೂತನ ಮುಖ್ಯಸ್ಥರ ಆಯ್ಕೆಗಾಗಿ ಭಾನುವಾರ ಇಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ರಾಷ್ಟ್ರಗಳ ಪೊಲೀಸ್ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಮಾಜಿ ಮುಖ್ಯಸ್ಥ ಮೆಂಗ್ ಹೊಂಗ್ವೀ ಅವರನ್ನು ಚೀನಾದಲ್ಲಿ ಬಂಧಿಸಿರುವ ಕಾರಣ ನೂತನ ಮುಖ್ಯಸ್ಥರ ಕುರಿತು ಚರ್ಚೆ ನಡೆಯಿತು.

ಚೀನಾದ ಸಾರ್ವಜನಿಕ ಭದ್ರತೆ ಇಲಾಖೆಯ ಉಪ ಸಚಿವರು ಕೂಡ ಆಗಿದ್ದ ಮೆಂಗ್ ಅವರು ಸೆಪ್ಟಂಬರ್ನಲ್ಲಿ ನಾಪತ್ತೆಯಾಗಿದ್ದರು.

ಪ್ರಕರಣವೊಂದರ ವಿಚಾರಣೆಗಾಗಿ ಚೀನಾದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಅನಂತರ ತಿಳಿದು ಬಂದಿತ್ತು.

ಕೊಸೊವೊ ದೇಶಕ್ಕೆ ಸದಸ್ಯತ್ವ ನೀಡುವುದರ ಕುರಿತೂ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಚರ್ಚೆ ನಡೆಸಿದವು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.