ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Iran-Israel Row: ಇಸ್ರೇಲ್‌ ಮೇಲೆ ಇರಾನ್‌ನಿಂದ ಭಾರಿ ಪ್ರಮಾಣದ ಡ್ರೋನ್‌ ದಾಳಿ

Published 14 ಏಪ್ರಿಲ್ 2024, 2:21 IST
Last Updated 14 ಏಪ್ರಿಲ್ 2024, 2:21 IST
ಅಕ್ಷರ ಗಾತ್ರ

ಜೆರುಸೆಲಂ: ಹಮಾಸ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧ ಏಳನೇ ತಿಂಗಳಿಗೆ ತಲುಪಿದ್ದು ಉದ್ವಿಗ್ನತೆ ಮುಂದುವರಿದಿದೆ. ಈ ನಡುವೆ ಇರಾನ್ ಸೇನೆಯು ಶನಿವಾರ ರಾತ್ರಿ ಇಸ್ರೇಲ್‌ ಮೇಲೆ ಭಾರಿ ಪ್ರಮಾಣದ ಡ್ರೋನ್‌ ದಾಳಿ ನಡೆಸಿದೆ. 

100ಕ್ಕೂ ಡ್ರೋನ್‌ಗಳು ಇರಾನ್‌ನಿಂದ ಇಸ್ರೇಲ್‌ನತ್ತ ಹಾರುತ್ತಿರುವುದು ಕಂಡುಬಂದಿದೆ ಎಂದು ಇರಾಕ್‌ನ ಭದ್ರತಾ ಮೂಲಗಳು ಹೇಳಿದ್ದು, ಡ್ರೋನ್‌ಗಳು ಗುರಿ ತಲುಪಲು ಹಲವು ಗಂಟೆಗಳು ಬೇಕು ಎಂದು ಇಸ್ರೇಲ್‌ ಮಿಲಿಟರಿ ಹೇಳಿದೆ ಎಂದು ವರದಿ ತಿಳಿಸಿದೆ.

ಏ.1ರಂದು ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್‌ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್‌ ಜನರಲ್‌ ಸೇರಿ ಏಳು ಸೇನಾಧಿಕಾರಿಗಳು ಹತರಾಗಿದ್ದರು. ಈ ದಾಳಿಗಾಗಿ ಇಸ್ರೇಲ್‌ ಅನ್ನು ಶಿಕ್ಷಿಸದೆ ಬಿಡೆವು ಎಂದು ಇರಾನ್‌ ಪರಮೋಚ್ಚ ನಾಯಕ ಅಯಾತ್‌ ಉಲ್ಲಾ ಅಲಿ ಖಮೇನಿ ಪ್ರತಿಜ್ಞೆ ಗೈದಿದ್ದರು. ಆದರೆ, ಇಸ್ರೇಲ್‌ ಈ ವೈಮಾನಿಕ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಇರಾನ್‌ ದಾಳಿ ಬಗ್ಗೆ ಮುನ್ಸೂಚನೆ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ‘ಇಸ್ರೇಲ್‌ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಇಸ್ರೇಲ್‌ಗೆ ಬೇಕಾದ ಎಲ್ಲ ನೆರವನ್ನು ನಾವು ನೀಡಲಿದ್ದೇವೆ. ಯುದ್ಧಕ್ಕೆ ಇಳಿದರೆ ಇರಾನ್‌ ಯಶ ಕಾಣುವುದಿಲ್ಲ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT