ಜಿನೇವಾ: ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಮೆರಿಕ ಜೊತೆಗಿನ ಎರಡನೇ ಹಂತದ ಮಾತುಕತೆಗೂ ಮುನ್ನ ಇರಾನ್ನ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯ ಮುಖ್ಯಸ್ಥರ ಜೊತೆಗೆ ಸೋಮವಾರ ಮಾತುಕತೆ ನಡೆಸಿದರು.

ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಸೋಮವಾರ ಜಿನೇವಾದಲ್ಲಿ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಮುಖ್ಯಸ್ಥ ರಫೇಲ್ ಗ್ರೊಸ್ಸಿ ಜೊತೆಗೆ ಮಾತುಕತೆ ನಡೆಸಿದರು.

‘ಅಮೆರಿಕ ಜೊತೆಗೆ ಇರಾನ್ ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಒಮಾನ್ನ ವಿದೇಶಾಂಗ ಸಚಿವ ಬದ್ರ್–ಅಲ್–ಬುಸೈದಿ ಜೊತೆಗೂ ಮಾತುಕತೆ ನಡೆಸುತ್ತೇನೆ’ ಎಂದು ಅರಾಘ್ಚಿ ತಿಳಿಸಿದರು.

‘ನ್ಯಾಯಯುತ ಒಪ್ಪಂದವನ್ನು ಸಾಧಿಸಲು ನಾನು ಜಿನೇವಾದಲ್ಲಿದ್ದೇನೆ’ ಎಂದು ಅರಾಘ್ಚಿ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.