ದುಬೈ: ಅಮೆರಿಕ ಮತ್ತು ಇಸ್ರೇಲ್ನ ಸೇನೆಗಳು ನಟಾನ್ಜ್ನಲ್ಲಿರುವ ಪರಮಾಣು ಘಟಕದ ಮೇಲೆ ದಾಳಿ ಮಾಡಿವೆ ಎಂದು ಇರಾನ್ ಸೋಮವಾರ ಆರೋಪಿಸಿದೆ.

ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (ಐಎಇಎ) ಇರಾನ್ನ ರಾಯಭಾರಿ ರೆಜಾ ನಜಾಫಿ ಅವರು ಈ ಬಗ್ಗೆ ಅಣು ಶಕ್ತಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ‘ನಟಾನ್ಜ್ನಲ್ಲಿರುವ ಪರಮಾಣು ಘಟಕದ ಮೇಲೆ ಮತ್ತೆ ದಾಳಿ ನಡೆಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ. ಜೂನ್ನಲ್ಲಿ ನಡೆದಿದ್ದ 12 ದಿನಗಳ ಸಂಘರ್ಷದ ಸಂದರ್ಭದಲ್ಲೂ ಅಮೆರಿಕ ಮತ್ತು ಇಸ್ರೇಲ್ ಈ ಘಟಕದ ಮೇಲೆ ದಾಳಿ ನಡೆಸಿದ್ದವು.

ಆದರೆ, ಪರಮಾಣು ಘಟಕದ ಮೇಲೆ ದಾಳಿ ನಡೆದಿರುವ ಯಾವುದೇ ಕುರುಹು ಕಂಡುಬಂದಿಲ್ಲ ಎಂದು ಐಎಇಎ ತಿಳಿಸಿದೆ. ‘ಯಾವುದೇ ಪರಮಾಣು ಘಟಕ ಹಾನಿಗೊಳಗಾಗಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ’ ಎಂದು ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಅವರು ಆಡಳಿತ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.