ಟೆಹರಾನ್: ಪರಮೊಚ್ಚ ನಾಯಕ ಅಯಾತೊಲ್ಲಾ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ಇರಾನ್ ರೆವೆಲ್ಯೂಷನರಿ ಗಾರ್ಡ್ ಹೇಳಿದೆ.

‘ಸಮುದಾಯದ ನಾಯಕನ ಹಂತಕರಿಗೆ ಕಠಿಣ, ನಿರ್ಣಾಯಕ ಮತ್ತು ಪಶ್ಚಾತಾಪ ಪಡುವಂತ ಶಿಕ್ಷೆ ನೀಡುತ್ತೇವೆ’ ಎಂದು ರೆವಲ್ಯೂಷನರಿ ಗಾರ್ಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
.ವಿದೇಶ ವಿದ್ಯಮಾನ: ಟ್ರಂಪ್ ಕಣ್ಣು ಯಾರ ಮೇಲೆ?.
‘ಇರಾನ್ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಆಕ್ರಮಣಕಾರಿ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಘೋಷಿಸಿರುವ ರೆವಲ್ಯೂಷರಿ ಗಾರ್ಡ್ಸ್, ಕೆಲವೇ ಕ್ಷಣಗಳಲ್ಲಿ ಇದು ಪ್ರಾರಂಭವಾಗಲಿದೆ’ ಎಂದು ತಿಳಿಸಿದೆ.

ಇರಾನ್ನ ‘ಫಾರ್ಸ್’ ಸುದ್ಧಿ ಸಂಸ್ಥೆಯು ಇದನ್ನು ವರದಿ ಮಾಡಿದೆ.

ಆಕ್ರಮಿತ ಪ್ರದೇಶಗಳು ಮತ್ತು ಅಮೆರಿಕದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಯಲಿವೆ ಎಂದು ಅದು ತಿಳಿಸಿದೆ.

‘ನಾವು ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಿದ್ದೇವೆ, ನಾವು ಅವರಿಗಾಗಿ ಶೋಕಿಸುತ್ತೇವೆ’ ಎಂದು ಖಮೇನಿ ಹತ್ಯೆಗೆ ರೆವಲ್ಯೂಷನರಿ ಗಾರ್ಡ್ಸ್ ಸಂತಾಪ ವ್ಯಕ್ತಪಡಿಸಿದೆ.

(ವಿವಿಧ ಸುದ್ದಿಮೂಲಗಳನ್ನು ಆಧರಿಸಿದ ಬರೆದ ಸುದ್ದಿ)
.ಕರ್ನಾಟಕದಲ್ಲಿದೆ ‘ಬೇಬಿ ಇರಾನ್’: ಚಿಕ್ಕಬಳ್ಳಾಪುರದ ಅಲೀಪುರಕ್ಕೆ ಬಂದಿದ್ದ ಖಮೇನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.