ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಜ್ಬುಲ್ಲಾ ವಿರುದ್ಧ ಯುದ್ಧಕ್ಕೆ ಇಸ್ರೇಲ್‌ ತಯಾರಿ

Published : 19 ಸೆಪ್ಟೆಂಬರ್ 2024, 15:54 IST
Last Updated : 19 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ಜೆರುಸಲೇಂ: ಲೆಬನಾನ್‌ನಲ್ಲಿ ಎಲೆಕ್ಟ್ರಾನಿಕ್‌ ಸಾಧನಗಳ ಸ್ಫೋಟದ ಬೆನ್ನಲ್ಲೇ ಇಸ್ರೇಲ್‌ನ ರಕ್ಷಣಾ ಸಚಿವರು ಯುದ್ಧದ ‘ಹೊಸ ಹಂತ’ದ ಆರಂಭ ಎಂದು ಘೋಷಿಸಿದ್ದಾರೆ. ಈ ಮೂಲಕ ಹಿಜ್ಬುಲ್ಲಾ ವಿರುದ್ಧ ಯುದ್ಧ ನಡೆಸಲು ಇಸ್ರೇಲ್‌ ತಯಾರಿ ನಡೆಸುತ್ತಿರುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆಯು ಇಸ್ರೇಲ್‌ ಮತ್ತು ಹಿಜ್ಬುಲ್ಲಾ ನಡುವೆ ಹಿಂದೆಂದಿಗಿಂತ ಸಂಪೂರ್ಣ ಯುದ್ಧದ ಭೀತಿಯನ್ನು ಸೃಷ್ಟಿಸಿದೆ.

ಹಮಾಸ್‌ ಯುದ್ಧ ಪ್ರಾರಂಭಿಸಿದ ಮರು ದಿನದಿಂದ (ಅಕ್ಟೋಬರ್‌ 8) ಲೆಬನಾನಿನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ವಿರುದ್ಧ ಇಸ್ರೇಲ್‌ ಗಡಿಯಾಚೆ ಗುಂಡಿನ ವಿನಿಮಯ ಮಾಡಿಕೊಂಡಿತ್ತು. ಇದೀಗ ಇಸ್ರೇಲ್‌, ದೇಶದ ಉತ್ತರ ಭಾಗದಲ್ಲಿ ಯಥಾಸ್ಥಿತಿಯನ್ನು ಬದಲಿಸಲು ಬಯಸಿರುವಂತೆ ಕಾಣುತ್ತಿದೆ. ಇದು ಸಂಘರ್ಷ ತಡೆಗೆ ರಾಜತಾಂತ್ರಿಕ ಪರಿಹಾರದ ಭರವಸೆಗಳನ್ನು ಕ್ಷೀಣಿಸುವಂತೆ ಮಾಡುತ್ತಿದೆ.

ಇತ್ತೀಚೆಗೆ ಉತ್ತರ ಗಡಿ ಭಾಗದಲ್ಲಿ ಇಸ್ರೇಲ್‌ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ. ಗಾಜಾ ಗಡಿಯಿಂದ ಸೇನಾ ಪಡೆಗಳನ್ನು ಉತ್ತರದ ಗಡಿ ಭಾಗಕ್ಕೆ ಸ್ಥಳಾಂತರಿಸುವುದರಲ್ಲಿ ತೊಡಗಿದೆ. ಇದರ ನಡುವೆ ಅಧಿಕಾರಿಗಳು ವಾಗ್ದಾಳಿಯನ್ನೂ ಹೆಚ್ಚಿಸಿದ್ದಾರೆ. ಇದು ಯುದ್ಧಕ್ಕೆ ಸನ್ನದ್ಧವಾಗುತ್ತಿರುವುದನ್ನು ತೋರಿಸುತ್ತದೆ.

ಈ ಹಿಂದೆಯೂ ಇಸ್ರೇಲ್‌ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟವು ಹಲವು ಬಾರಿ ಉಲ್ಬಣಗೊಂಡಿದ್ದಿದೆ. ಆದರೆ, ಆಗೆಲ್ಲ ಈ ಪರಮ ಶತ್ರುಗಳು ಜಾಗರೂಕವಾಗಿ ಸಂಪೂರ್ಣ ಯುದ್ಧ ನಡೆಯದಂತೆ ಎಚ್ಚರವಹಿಸಿದ್ದವು.

ಈ ಬಾರಿಯ ಪರಿಸ್ಥಿತಿ ಭಿನ್ನವಾಗಿದೆ. ಲೆಬನಾನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಪೇಜರ್‌ಗಳು, ವಾಕಿ–ಟಾಕಿಗಳು ಮತ್ತು ಇತರ ಸಾಧನಗಳು ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟದ್ದಾರೆ. ಸಹಸ್ರಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಫೋಟಗಳಿಗೆ ಇಸ್ರೇಲ್‌ ಕಾರಣ ಎಂಬುದು ಹಿಜ್ಬುಲ್ಲಾದ ಆರೋಪವಾಗಿದೆ. ಅಲ್ಲದೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಶಪಥ ಕೂಡ ಮಾಡಿದೆ.

ಇಸ್ರೇಲ್‌ನ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ಅವರು ಬುಧವಾರ ರಾತ್ರಿ, ಯುದ್ಧದ ‘ಹೊಸ ಹಂತ’ದ ಪ್ರಾರಂಭವನ್ನು ಘೋಷಿಸಿದ್ದಾರೆ. ಇಸ್ರೇಲ್‌ ತನ್ನ ಗಮನವನ್ನು ಹಿಜ್ಬುಲ್ಲಾ ಕಡೆಗೆ ತಿರುಗಿಸುತ್ತಿದೆ. ಸಂಪನ್ಮೂಲ ಮತ್ತು ಸೇನಾ ಪಡೆಗಳನ್ನು ಉತ್ತರಕ್ಕೆ ರವಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT