ಸಿಡಾನ್: ದಕ್ಷಿಣ ಮತ್ತು ಪೂರ್ವ ಲೆಬನಾನ್ನ ಪ್ರದೇಶಗಳ ಮೇಲೆ ಇಸ್ರೇಲ್ ವಾಯುಪಡೆಯು ಸೋಮವಾರ ಹಾಗೂ ಮಂಗಳವಾರ ನಸುಕಿನಲ್ಲಿ ವಾಯುದಾಳಿ ನಡೆಸಿದೆ.

ಕರಾವಳಿ ನಗರವಾದ ಸಿಡಾನ್ ಮೇಲೆ ಸೋಮವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಧ್ವಂಸಗೊಂಡಿದೆ.

ಯುದ್ಧದ ತೀವ್ರತೆಯನ್ನು ಕಡಿಮೆಗೊಳಿಸುವ ಅಂತರರಾಷ್ಟ್ರೀಯ ಪ್ರಯತ್ನಗಳು, ಹಿಜ್ಬುಲ್ಲಾ ಪ್ರಾಬಲ್ಯದ ಪ್ರದೇಶಗಳಲ್ಲಿ ಸರ್ಕಾರದ ಪಾರಮ್ಯ ಹೆಚ್ಚಿಸಲು ಮತ್ತು ಉಗ್ರರನ್ನು ನಿಶ್ಶಸ್ತ್ರಗೊಳಿಸಲು ಲೆಬನಾನ್ ಮಾಡುತ್ತಿರುವ ಪ್ರಯತ್ನಗಳಿಗೆ ಈ ದಾಳಿ ವಿರುದ್ಧವಾಗಿದೆ ಎಂದು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.