ಜೆರುಸಲೇಂ: ಬೇಹುಗಾರಿಕೆಯ ಹೊಸ ಉಪಗ್ರಹವೊಂದನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಾಗಿ ಇಸ್ರೇಲ್‌ನ ರಕ್ಷಣಾ ಸಚಿವಾಲಯವು ಸೋಮವಾರ ಹೇಳಿದೆ.

‘ಒಫೆಕ್ 16’ ಎಂಬ ಈ ಕಣ್ಗಾವಲು ಉಪಗ್ರಹವನ್ನು ಸೋಮವಾರ ನಸುಕಿನ 4 ಗಂಟೆಗೆ ಉಡಾವಣೆ ಮಾಡಲಾಗಿದೆ. ‘ಒಫೆಕ್’, ಹೆಚ್ಚಿನ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರೊ ಆಪ್ಟಿಕಲ್ ಉಪಗ್ರಹವಾಗಿದೆ. ಕಕ್ಷೆಯನ್ನು ಸೇರಿದ ಕೆಲವೇ ಕ್ಷಣಗಳಲ್ಲಿ ಅದು ದತ್ತಾಂಶಗಳನ್ನು ಕಳುಹಿಸಲು ಆರಂಭಿಸಿದೆ. ರಕ್ಷಣಾ ಸಚಿವಾಲಯ ಹಾಗೂ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಎಂಜಿನಿಯರ್‌ಗಳು ಈಗ ಪರಿಶೀಲನೆ ನಡೆಸುತ್ತಿದ್ದು, ಸದ್ಯದಲ್ಲೇ ಅದು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಸಚಿವಾಲಯ ತಿಳಿಸಿದೆ.

‘ತಂತ್ರಜ್ಞಾನದ ಶ್ರೇಷ್ಠತೆ ಹಾಗೂ ಗುಪ್ತಚರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಇಸ್ರೇಲ್‌ನ ಭದ್ರತೆಗೆ ಅತ್ಯಗತ್ಯವಾಗಿದೆ. ಈ ಉಪಗ್ರಹದ ಉಡಾವಣೆಯು ಇಸ್ರೇಲ್‌ನ ಅಸಾಮಾನ್ಯ ಸಾಧನೆ’ ಎಂದು ರಕ್ಷಣಾ ಸಚಿವ ಬೆನ್ನಿ ಗಾಂಟ್ಸ್ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.