ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾ ಮೇಲೆ ಇಸ್ರೇಲ್‌ ದಾಳಿ: 14 ಮಂದಿ ಸಾವು

Published : 27 ಆಗಸ್ಟ್ 2024, 14:32 IST
Last Updated : 27 ಆಗಸ್ಟ್ 2024, 14:32 IST
ಫಾಲೋ ಮಾಡಿ
Comments

ಜೆರುಸಲೇಂ: ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ಪ್ರತ್ಯೇಕ ವಾಯುದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಗಾಜಾ ನಗರದ ಹೊರವಲಯದ ‘ತುಫಾ’ ಪ್ರದೇಶದ ಮೇಲೆ ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ ಮೂರು ಮಕ್ಕಳು ಹಾಗೂ ಅವರ ತಾಯಿ ಸಾವಿಗೀಡಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಮತ್ತೊಂದು ಘಟನೆಯಲ್ಲಿ ಒಂದು ಮಗು, ಮೂವರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಮತ್ತೊಂದೆಡೆ, ಗಾಜಾದ ದಕ್ಷಿಣ ಭಾಗದಲ್ಲಿ ಮನೆಯೊಂದರ ಮೇಲೆ ಮಂಗಳವಾರ ದಾಳಿ ನಡೆದಿದ್ದು, ಮೂವರು ಮಕ್ಕಳು, ಒಬ್ಬ ಮಹಿಳೆ ಹಾಗೂ ಪುರುಷ ಸಾವಿಗೀಡಾಗಿದ್ದಾರೆ. ಆದರೆ, ಇಸ್ರೇಲ್‌ ನಡೆಸಿದ ಈ ದಾಳಿಯಲ್ಲಿ ಮೃತಪಟ್ಟವರು ನಾಗರಿಕರೋ ಅಥವಾ ಬಂಡುಕೋರರೋ ಎಂಬ ಬಗ್ಗೆ ಸಚಿವಾಲಯವು ಯಾವುದೇ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT