ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಜ್ಬುಲ್ಲಾಗೆ ಸಂಬಂಧಿಸಿದ 220 ಸ್ಥಳಗಳ ಮೇಲೆ ಇಸ್ರೇಲ್ ಸೇನೆ ದಾಳಿ

Published : 27 ಸೆಪ್ಟೆಂಬರ್ 2024, 1:57 IST
Last Updated : 27 ಸೆಪ್ಟೆಂಬರ್ 2024, 1:57 IST
ಫಾಲೋ ಮಾಡಿ
Comments

ಜೆರುಸಲೇಂ: ಲೆಬನಾನ್‌ನಲ್ಲಿ ಹಿಜ್ಬುಲ್ಲಾಗೆ ಸಂಬಂಧಿಸಿದ 220 ಸ್ಥಳಗಳ ಮೇಲೆ ವಾಯುಪಡೆ ಕಳೆದ ಒಂದು ದಿನದಲ್ಲಿ ದಾಳಿ ಮಾಡಿದೆ ಎಂದು ಇಸ್ರೇಲ್‌ ಸೇನೆ ಗುರುವಾರ ತಿಳಿಸಿದೆ.

ಮೂಲಸೌಕರ್ಯ ನೆಲೆಗಳು, ಇಸ್ರೇಲ್‌ನತ್ತ ಕ್ಷಿಪಣಿಗಳನ್ನು ಉಡಾಯಿಸಲು ಇರಿಸಿದ್ದ ಲಾಂಚರ್‌ಗಳು ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಹೊಂದಿದ್ದ ಶಸ್ತ್ರಾಸ್ತ್ರ ಸಂಗ್ರಹಾಗಾರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

'ಇಸ್ರೇಲ್‌ ರಕ್ಷಣಾ ಪಡೆ (ಐಡಿಎಫ್‌) ಹಿಜ್ಬುಲ್ಲಾ ಭಯೋತ್ಪಾದಕ ಸಾಮರ್ಥ್ಯ ಮತ್ತು ಮೂಲಸೌಕರ್ಯವನ್ನು ನಾಶಮಾಡಲು ಕಾರ್ಯಾಚರಣೆ ಮುಂದುವರಿಸಲಿದೆ' ಎಂದು ಸೇನೆ ಸ್ಪಷ್ಟಪಡಿಸಿದೆ.

ಲೆಬನಾನ್‌ನಲ್ಲಿ ಕದನ ವಿರಾಮ ಘೋಷಣೆಗೆ ಅಮೆರಿಕ ಮತ್ತು ಫ್ರಾನ್ಸ್‌ ಇರಿಸಿದ್ದ ಪ್ರಸ್ತಾಪವನ್ನು ಇಸ್ರೇಲ್‌ ಗುರುವಾರ ತಿರಸ್ಕರಿಸಿದೆ. 'ಹಿಜ್ಬುಲ್ಲಾದವರು ಶರಣಾಗದಿದ್ದರೆ ಯುದ್ಧ ಮುಂದುವರಿಯುತ್ತದೆ’ ಎಂದು ಖಚಿತವಾಗಿ ಹೇಳಿದೆ.

ಪರಿಸ್ಥಿತಿ ಕೈಮೀರುತ್ತಿರುವುದರಿಂದ ತಕ್ಷಣವೇ ಲೆಬನಾನ್‌ ತೊರೆಯುವಂತೆ ಅಲ್ಲಿ ನೆಲೆಸಿರುವ ತನ್ನ ನಾಗರಿಕರಿಗೆ ಭಾರತ, ಆಸ್ಟ್ರೇಲಿಯಾ ಕರೆ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT