ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೆಬನಾನ್‌ನಲ್ಲಿ ಕದನ ವಿರಾಮ: ಅಮೆರಿಕ–ಫ್ರಾನ್ಸ್‌ ಪ್ರಸ್ತಾಪ ತಿರಸ್ಕರಿಸಿದ ಇಸ್ರೇಲ್

Published : 26 ಸೆಪ್ಟೆಂಬರ್ 2024, 10:58 IST
Last Updated : 26 ಸೆಪ್ಟೆಂಬರ್ 2024, 10:58 IST
ಫಾಲೋ ಮಾಡಿ
Comments

ಜೆರುಸಲೇಂ/ಲಂಡನ್‌/ಬೈರೂತ್‌: ‘ಹಿಜ್ಬುಲ್ಲಾದವರು ಶರಣಾಗಬೇಕು, ಇಲ್ಲದಿದ್ದರೆ ಯುದ್ಧ ಮುಂದುವರಿ ಯಲಿದೆ’ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವ ಕ್ಯಾಟ್ಸ್‌ ಹೇಳುವ ಮೂಲಕ ಲೆಬನಾನ್‌ ಮೇಲಿನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದ್ದಾರೆ.

ಹಣಕಾಸು ಸಚಿವ ಬೆಜಲಲ್‌ ಸ್ಮೂತ್‌ರಿಚ್‌ ಕೂಡ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದು, ‘ತೀವ್ರ ದಾಳಿಗಳಿಂದ ನಲುಗಿರುವ ಶತ್ರುವುಚೇತರಿಸಿಕೊಳ್ಳುವುದಕ್ಕೆ ಅವಕಾಶ ಸಿಗಬಾರದು’ ಎಂದಿದ್ದಾರೆ.

‘ಉಗ್ರ ಸಂಘಟನೆ ಹಿಜ್ಬುಲ್ಲಾ ವಿರುದ್ಧ ಯುದ್ಧ ಮುಂದುವರಿಸಲು ಸಜ್ಜಾಗಿ’ ಎಂದು ಬುಧವಾರ ಇಸ್ರೇಲ್‌ನ ಸೇನಾ ಮುಖ್ಯಸ್ಥರು ಸೇನೆಗೆ ಸೂಚಿಸಿದ್ದರು. ಈ ಮಧ್ಯೆ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸುತ್ತಿರುವ ಯುದ್ಧಕ್ಕೆ 21 ದಿನಗಳ ಕದನವಿರಾಮ ಘೋಷಿಸಬೇಕು ಎಂದು ಅಮೆರಿಕ, ಫ್ರಾನ್ಸ್‌, ಅರಬ್‌ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು ಇಸ್ರೇಲ್‌ ಅನ್ನು
ಆಗ್ರಹಿಸಿದ್ದವು. ಆದರೆ, ಇಸ್ರೇಲ್‌ ಈ ಆಗ್ರಹಕ್ಕೆ ಮಣಿದಿಲ್ಲ.

‘ವಿಶ್ವಸಂಸ್ಥೆಯಲ್ಲಿ ಮಾತನಾಡು ವುದಕ್ಕಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗುರುವಾರ ಅಮೆರಿಕಕ್ಕೆ ತೆರಳುವ ಮುನ್ನ, ಸೇನೆಗೆ ಕೆಲವು ಆದೇಶಗಳನ್ನು ನೀಡಿದ್ದಾರೆ. ಈಗಾಗಲೇ ಯೋಜಿಸಿರುವಂತೆ ನಮ್ಮಕಾರ್ಯಾಚರಣೆಯನ್ನು ಮುಂದುವರಿಸಿ ಎಂದಿದ್ದಾರೆ. ಜೊತೆಗೆ, ಅಮೆರಿಕ–ಫ್ರಾನ್ಸ್‌ ಮುಂದಿಟ್ಟಿರುವ ಈ ಪ್ರ ಸ್ತಾವಕ್ಕೆ ಪ್ರಧಾನಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ನೆತನ್ಯಾಹು ಅವರ ಕಾರ್ಯಾಲಯ ತಿಳಿಸಿದೆ. ಈ ಮಧ್ಯೆ, ಲೆಬನಾನ್‌ ಮೇಲೆ ಹೊಸದೊಂದು ಸರಣಿ ವಾಯುದಾಳಿಯನ್ನು ನಡೆಸುವುದಾಗಿ ಸೇನೆ ಹೇಳಿದೆ.

‘ಇಸ್ರೇಲ್‌ನ ವಾಯುದಾಳಿಗೆ ಸಿರಿಯಾದ 23 ಕಾರ್ಮಿಕರು ಮೃತಪಟ್ಟಿದ್ದಾರೆ. ಕಟ್ಟಡದ ಅವಷೇಶಗಳ ಅಡಿ ಯಿಂದ ಮೃತದೇಹಗಳನ್ನು ಹೊರತೆಗೆ ಯಲಾಯಿತು. ಈ ದಾಳಿಯಲ್ಲಿ ಸಿರಿಯಾದ ನಾಲ್ವರು ಹಾಗೂ ಲೆಬನಾನ್‌ನ ನಾಲ್ವರಿಗೆ ಗಾಯಗಳಾಗಿವೆ’ ಎಂದು ಲೆಬನಾನ್‌ನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಕಮಾಂಡರ್‌ ಸಾವು: ಇಸ್ರೇಲ್‌ ನಡೆಸಿದ ದಾಳಿಗೆ ಹಿಜ್ಬುಲ್ಲಾದ ಡ್ರೋನ್‌ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಸ್ರೂರ್‌ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್‌ ಸೇನೆ, ‘ವಾಯು ಸೇನೆಯ ಹಾಗೂ ಗುಪ್ತಚರ ಮಾಹಿತಿ ಮೇರೆಗೆ ದಾಳಿ ನಡೆಸಿದೆವು. ಹಿಜ್ಬುಲ್ಲಾ ವಾಯುಪಡೆ ವಿಭಾಗದ ಕಮಾಂಡರ್‌ನನ್ನು ಹೊಡೆದುರುಳಿಸಿದ್ದೇವೆ’ ಎಂದಿದೆ.


ಈ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಕಾರ್ಯಾಚರಣೆ ಮುಂದುವರಿಸಬೇಕು ಎಂದು ಸೇನೆಗೆ ಸೂಚನೆ ನೀಡಿದ್ದಾರೆ.

‘ಉತ್ತರದಲ್ಲಿ ಯಾವುದೇ ಕದನ ವಿರಾಮ ಇಲ್ಲ. ಜಯಗಳಿಸುವ ಹಾಗೂ ಅಲ್ಲಿನ ಜನ ಸುರಕ್ಷಿತವಾಗಿ ಮನೆಗೆ ಮರಳುವವರೆಗೂ ಹಿಜ್ಬುಲ್ಲಾ ಉಗ್ರವಾದಿ ಸಂಘಟನೆ ವಿರುದ್ಧ ನಮ್ಮ ಹೋರಾಟ ನಿಲ್ಲದು’ ಎಂದು ಕಾಟ್ಜ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಲೆಬನಾನ್‌ ತೊರೆಯಲು ಭಾರತೀಯರಿಗೆ ಮನವಿ

‘ಪರಿಸ್ಥಿತಿ ಬಿಗಡಾಯಿಸುತ್ತಿರುವ ಕಾರಣ ಲೆಬನಾನ್‌ನಲ್ಲಿರುವ ಭಾರತೀಯರು ತಕ್ಷಣವೇ ದೇಶವನ್ನು ತೊರೆಯಬೇಕು’ ಎಂದು ಭಾರತವು ಗುರುವಾರ ಸೂಚಿಸಿದೆ. ‘ಲೆಬನಾನ್‌ನಲ್ಲಿ ಈಗಾಗಲೇ ಇರುವ ಭಾರತೀಯರು ತಕ್ಷಣವೇ ಅಲ್ಲಿಂದ ಹೊರಬನ್ನಿ. ಒಂದು ವೇಳೆ ಅಲ್ಲಿಯೇ ಇರಬೇಕಾದ ಪರಿಸ್ಥಿತಿ ಇದ್ದರೆ, ಮನೆ ಒಳಗೆ ಇರಿ, ಅನಗತ್ಯವಾಗಿ ಹೊರಗಡೆ ತಿರುಗಾಡಬೇಡಿ. ಜೊತೆಗೆ, ಬೈರೂತ್‌ನಲ್ಲಿರುವ ರಾಯಭಾರ ಕಚೇರಿಯ ಸಂಪರ್ಕದಲ್ಲಿರಿ’ ಎಂದು ಹೇಳಿದೆ.ಈ ‍ಪ್ರಕಟಣೆ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಹೊಸದಾಗಿ ದಾಳಿ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT