ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಕೂಡಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆ ಮಾಡಿದರು, ಕತಾರ್ ಮಧ್ಯಸ್ಥಿಕೆ ವಹಿಸಿತ್ತು ಎಂದು ಶ್ವೇತಭವನದ ಹಿರಿಯದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
.ಈವರೆಗೂ ಇಸ್ರೇಲ್ ಜೊತೆ ಯಾವುದೇ ಕದನ ವಿರಾಮ ಏರ್ಪಟ್ಟಿಲ್ಲ: ಇರಾನ್ ವಿದೇಶಾಂಗ ಸಚಿವ.
ಕತಾರ್ನ ಅಮೀರ್ ಶೇಖ್ ತಮೀಮ್ ಬಿಬ್ ಹಮದ್ ಅಲ್ ಥಾನಿ ಅವರು ಕದಾನ ವಿರಾಮ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಆ ಅಧಿಕಾರಿ ತಿಳಿಸಿದ್ದಾರೆ.

ಮಾತುಕತೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಅಧಿಕಾರ ಇಲ್ಲದಿರುವುದರಿಂದ ಹೆಸರನ್ನು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಅವರು ಈ ಮಾಹಿತಿಯನ್ನು ‘ನ್ಯೂಯಾರ್ಕ್ ಟೈಮ್ಸ್’ನೊಂದಿಗೆ ಹಂಚಿಕೊಂಡಿದ್ದಾರೆ.
.ಸಂಪಾದಕೀಯ | ಇಸ್ರೇಲ್–ಇರಾನ್ ಸಮರಾಂಗಣ; ಅಮೆರಿಕದ ಮಧ್ಯಪ್ರವೇಶ ಅನಪೇಕ್ಷಿತ.
ಪೂರ್ವ ವಲಯ ಸಮಯ ಸುಮಾರು ಸಂಜೆ 6 ಗಂಟೆಗೆ (ಭಾರತದಲ್ಲಿ ಮುಂಜಾನೆ 3.30) ಕದನ ವಿರಾಮದ ಬಗ್ಗೆ ಟ್ರಂಪ್ ಘೋಷಣೆ ಮಾಡಿದ್ದರು. ಅದು ಅವರ ಆಡಳಿತದ ಹಿರಿಯ ಅಧಿಕಾರಿಗಳಿಗೂ ಅಚ್ಚರಿಯುಂಟು ಮಾಡಿದೆ. ಕದನ ವಿರಾಮದ ಬಗ್ಗೆ ಇಸ್ರೇಲ್ನಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಟ್ರಂಪ್ ಘೋಷಣೆ ಮಾಡಿದ ಮೂರು ಗಂಟೆಯೊಳಗೆ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಇದರಿಂದ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿವೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
.ಇಸ್ರೇಲ್–ಇರಾನ್ ನಡುವೆ ಸಂಪೂರ್ಣ ಕದನ ವಿರಾಮ: ಡೊನಾಲ್ಡ್ ಟ್ರಂಪ್ ಘೋಷಣೆ.
ಇರಾನ್ನ ಪರಮಾಣು ಕಾರ್ಯಕ್ರಮವನ್ನು ಮೊಟಕುಗೊಳಿಸುವ ಒಪ್ಪಂದಕ್ಕಾಗಿ ಕಳೆದ ಎರಡು ತಿಂಗಳುಗಳಿಂದ ಪ್ರಯತ್ನ ಮಾಡುತ್ತಿದ್ದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಟ್ರಂಪ್ರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ಕದನ ವಿರಾಮಕ್ಕೆ ಟ್ರಂಪ್ ಮೇಲೆ ಒತ್ತಡ ಹೇರಿದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಇರಾನ್ ಅನ್ನು ಸಂಪರ್ಕಿಸಲು ಈ ಮೂವರು ನೇರ ಹಾಗೂ ಪರೋಕ್ಷ ಮಾರ್ಗಗಳನ್ನು ಬಳಸಿದರು. ಇರಾನ್ನಿಂದ ಯಾವುದೇ ದಾಳಿ ನಡೆಯುವುದಿಲ್ಲ ಎಂದಾದರೆ ಮಾತ್ರ ಕದನ ವಿರಾಮ ಎನ್ನುವ ಷರತ್ತಿನೊಂದಿಗೆ ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಕೊಂಡಿತು ಎಂದು ಅವರು ಹೇಳಿದ್ದಾರೆ.
.ಕುಖ್ಯಾತ ಎವಿನ್ ಜೈಲು ಸಹಿತ ಇರಾನ್ ಸರ್ಕಾರ ಗುರಿಯಾಗಿಸಿ ದಾಳಿ: ಇಸ್ರೇಲ್ ಮಾಹಿತಿ.
ಕದನ ವಿರಾಮ ಮಾತುಕತೆಗೆ ಒಪ್ಪಬೇಕು ಎಂದು ಇಸ್ರೇಲ್ಗೆ ಷರತ್ತು ವಿಧಿಸಿ ಅಮೆರಿಕ ಇಸ್ರೇಲ್ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿತ್ತು ಎಂದೂ ಅವರು ಹೇಳಿದ್ದಾರೆ.

ಆದರೆ ಯಾವ ಷರತ್ತಿನೊಂದಿಗೆ ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿತು ಎನ್ನುವುದರ ಬಗ್ಗೆ ಮಾಹಿತಿ ನೀಡಲು ಅಧಿಕಾರಿ ನಿರಾಕರಿಸಿದರು.

(ವಿವಿಧ ಮೂಲಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.ಇರಾನ್ನ ಪರಮಾಣು ಸಂಶೋಧನಾ ಕೇಂದ್ರ ಸೇರಿದಂತೆ ಹಲವೆಡೆ ದಾಳಿ ಮಾಡಿದ್ದೇವೆ: ಇಸ್ರೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.