ವಾಷಿಂಗ್ಟನ್: ಇಸ್ರೇಲ್–ಇರಾನ್ ನಡುವಣ ಯುದ್ಧ ಸಂಪೂರ್ಣ ಅಂತ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕತಾರ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಕದನ ವಿರಾಮಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ.
.ಸಂಪಾದಕೀಯ | ಇಸ್ರೇಲ್–ಇರಾನ್ ಸಮರಾಂಗಣ; ಅಮೆರಿಕದ ಮಧ್ಯಪ್ರವೇಶ ಅನಪೇಕ್ಷಿತ.
‘24 ಗಂಟೆಗಳ ಹಂತ ಹಂತದ ಕದನ ವಿರಾಮವು ಮಂಗಳವಾರ ಪೂರ್ವ ಸಮಯ ಮಧ್ಯರಾತ್ರಿಯ ಸುಮಾರಿಗೆ ಪ್ರಾರಂಭವಾಗಲಿದೆ ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಇದು ಯುದ್ಧಕ್ಕೆ ಅಧಿಕೃತ ಅಂತ್ಯ ತರುತ್ತದೆ ಎಂದು ಬರೆದುಕೊಂಡಿದ್ದಾರೆ.

ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ಏರ್ಪಟ್ಟಿದೆ. ಅಲ್ಲಿಗೆ ‘12 ದಿನಗಳ ಯುದ್ಧ’ ಕೊನೆಗೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.

ಕದನ ವಿರಾಮವು ಶಾಂತಿಯುತ ಮತ್ತು ಗೌರವಯುತವಾಗಿರುತ್ತದೆ. ‘12 ದಿನಗಳ ಯುದ್ಧ’ವನ್ನು ತ್ರಾಣ, ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಕೊನೆಗೊಳಿಸಿದ್ದಕ್ಕಾಗಿ ನಾನು ಇಸ್ರೇಲ್ ಹಾಗೂ ಇರಾನ್ ಅನ್ನು ಅಭಿನಂದಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
.ಕತಾರ್, ಇರಾಕ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ.
‘ಈ ಯುದ್ಧ ವರ್ಷಗಳ ಕಾಲ ನಡೆಯಬಹುದಿತ್ತು. ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು, ಆದರೆ ಅದು ಆಗಲಿಲ್ಲ, ಮತ್ತು ಎಂದಿಗೂ ಆಗುವುದಿಲ್ಲ’ ಎಂದಿದ್ದಾರೆ.

‘ದೇವರು ಇಸ್ರೇಲ್ ಅನ್ನು ಆಶೀರ್ವದಿಸಲಿ, ದೇವರು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ’ ಎಂದು ಟ್ರಂಪ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
.ಇರಾನ್ ವಿದೇಶಾಂಗ ಸಚಿವರ ಭೇಟಿ: ಬೆಂಬಲ ವ್ಯಕ್ತಪಡಿಸಿದ ರಷ್ಯಾ ಅಧ್ಯಕ್ಷ ಪುಟಿನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.