ಡೈಯರ್ ಅಲ್–ಬಲಾಹ್ (ಗಾಜಾ ಪಟ್ಟಿ): ಲೆಬನಾನ್ ಮೇಲೆ ಭೂ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್, ತನ್ನ ಯೋಧ ಮೃತಪಟ್ಟಿರುವುದಾಗಿ ಬುಧವಾರ ಖಚಿತಪಡಿಸಿದೆ.
22 ವರ್ಷದ ಕಮಾಂಡೊ ಲೆಬನಾನ್‌ನಲ್ಲಿ ಹುತಾತ್ಮನಾಗಿರುವುದಾಗಿ ಇಸ್ರೇಲ್ ಹೇಳಿದೆ.
ಲೆಬನಾನ್ ಮೇಲಿನ ಆಕ್ರಮಣದ ಬಳಿಕ ಇಸ್ರೇಲ್ ಪಡೆಯಲ್ಲಿ ವರದಿಯಾದ ಮೊದಲ ಸಾವು ಇದಾಗಿದೆ.
ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ, ಇರಾನ್ ಸೇನೆ ಇಸ್ರೇಲ್‌ನತ್ತ ಮಂಗಳವಾರ ಕ್ಷಿಪಣಿ ದಾಳಿ ಮಾಡಿದೆ.
ಹಿಜ್ಬುಲ್ಲಾ ಹಾಗೂ ಹಮಾಸ್‌ಗೆ ಇರಾನ್ ಬೆಂಬಲ ನೀಡುತ್ತಿರುವಂತೆಯೇ, ಇಸ್ರೇಲ್‌ಗೆ ನೆರವಾಗಲು ಅಮೆರಿಕ ಮುಂದಾಗಿದೆ. ಇದು ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಿಸುವ ಆತಂಕ ಸೃಷ್ಟಿಸಿದೆ.