ಖಾನ್ ಯೂನಿಸ್: ಗಾಜಾಪಟ್ಟಿಯ ಖಾನ್ ಯೂನಿಸ್ ನಗರದ ಸುರಂಗದಲ್ಲಿ ಹಮಾಸ್ ಬಂಡುಕೋರರು ಒತ್ತೆಯಾಳುಗಳನ್ನು ಇರಿಸಿದ್ದ ಕುರುಹುಗಳು ಪತ್ತೆಯಾಗಿವೆ ಎಂದು ಇಸ್ರೇಲ್ನ ಸೇನಾಪಡೆ ಗುರುವಾರ ಹೇಳಿದೆ.

‘ಏಣಿಯ ಮೂಲಕ 2.5 ಮೀಟರ್ ಆಳಕ್ಕೆ ಇಳಿದು ಈ ಸುರಂಗವನ್ನು ಪ್ರವೇಶಿಸಬೇಕಾಗಿದೆ. ಕಾಂಕ್ರೀಟ್ ಗೋಡೆಯ ಸುರಂಗವು ಕಿರಿದಾಗಿದ್ದು, ವಿದ್ಯುತ್ ಸಂಪರ್ಕವನ್ನು ಹೊಂದಿದೆ. ಇದರೊಳಗೆ ಶೌಚಾಲಯದ ವ್ಯವಸ್ಥೆಯೂ ಇದೆ ಎಂದು’ ಇಸ್ರೇಲ್ ಸೇನೆಯ ಮೂಲಗಳು ತಿಳಿಸಿವೆ.

ಸುರಂಗದೊಳಗೆ ಯಾವ ವಸ್ತುಗಳು ಪತ್ತೆಯಾಗಿವೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕೆಲವು ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ನವೆಂಬರ್ನಲ್ಲಿ ಬಿಡುಗಡೆಗೊಳಿಸಿದ್ದರು.

ಸುರಂಗ ಪತ್ತೆಯಾಗಿರುವ ಪ್ರದೇಶದಲ್ಲಿ ಇಸ್ರೇಲ್ ಯೋಧರು ಮತ್ತು ಹಮಾಸ್ ಬಂಡುಕೋರರ ನಡುವೆ ತೀವ್ರ ಕದನ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬಂಡುಕೋರರು ಸುರಂಗದಲ್ಲಿ ನೆಲೆಸಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಸುರಂಗಗಳ ಧ್ವಂಸಕ್ಕೆ ಆದ್ಯತೆ ನೀಡಲಾಗುವುದು ಎಂದು ಇಸ್ರೇಲ್ ಸೇನಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಮಾಸ್ ಮುಖಂಡ ಯಾಹ್ಯಾ ಸಿನ್ವಾರ್ ಅವರು ಖಾನ್ ಯೂನಿಸ್ನ ಸುರಂಗದೊಳಗೆ ಅವಿತಿರುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.