ಟೆಲ್ ಅವೀವ್: ‘ಉತ್ತರ ಇಸ್ರೇಲ್‌ನಲ್ಲಿರುವ ಹೈ–ಸೆಕ್ಯುರಿಟಿ ಜೈಲಿನಿಂದ ಆರು ಪ್ಯಾಲೆಸ್ಟೀನಿಯನ್ ಕೈದಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಇಸ್ರೇಲ್ ಪೊಲೀಸರು ಸೋಮವಾರ ತಿಳಿಸಿದರು.

ಗಿಲ್ಬೋವಾ ಜೈಲಿನಿಂದ ರಾತ್ರಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಇದು ಇಸ್ರೇಲ್‌ನ ಅತ್ಯಂತ ಹೆಚ್ಚು ಭದ್ರತೆಯುಳ್ಳ ಕಾರಾಗೃಹಗಳಲ್ಲಿ ಒಂದಾಗಿದೆ. ಇಲ್ಲಿಂದ ಕೈದಿಗಳು ಪರಾರಿಯಾಗಿರುವ ನಿರ್ದಶನಗಳು ಅತಿ ಕಡಿಮೆ.

‘ಈ ಕೈದಿಗಳನ್ನು ಪತ್ತೆ ಹಚ್ಚಲು ರಸ್ತೆ ತಡೆಗಳನ್ನು ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲಿ ಗಸ್ತು ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಕೈದಿಗಳು ಸುರಂಗಗಳ ಮೂಲಕ ಪರಾರಿಯಾಗಿದ್ದು, ಅವರಿಗೆ ಹೊರಗಿನಿಂದ ಸಹಾಯ ದೊರಕಿದೆ. ಈ ಕೈದಿಗಳಲ್ಲಿ ಇಸ್ರೇಲ್ ಮೇಲಿನ ಮಾರಣಾಂತಿಕ ದಾಳಿಗಳಲ್ಲಿ ಭಾಗಿಯಾಗಿದ್ದ ಜಕಾರಿಯ ಜುಬೇದಿ ಕೂಡ ಒಬ್ಬ. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು’ ಎಂದು ಅವರು ಮಾಹಿತಿ ನೀಡಿದರು.

ಈ ಕೈದಿಗಳು ಜೆನಿನ್‌ನತ್ತ ತೆರಳಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಪ್ಯಾಲೆಸ್ಟೀನಿಯನ್ ಆಡಳಿತವು ಸ್ವಲ್ಪ ಮಟ್ಟಿನ ಹಿಡಿತ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.