ವಾಷಿಂಗ್ಟನ್: ಗರ್ಭಪಾತವನ್ನು ರಾಷ್ಟ್ರವ್ಯಾಪಿ ಕಾನೂನುಬದ್ಧಗೊಳಿಸಿರುವ 1973ರ ರೋಯ್ ವಿ.ವೇಡ್ ನಿರ್ಧಾರವನ್ನು ರದ್ದು ಪಡಿಸುವ ಸುಪ್ರೀಂ ಕೋರ್ಟ್‌ನ ಕರಡನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಟೀಕಿಸಿದ್ದಾರೆ.

‘ಇದು ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲಭೂತವಾದ ಬದಲಾವಣೆಯಾಗಿದೆ’ ಎಂದು ಬೈಡನ್ ಹೇಳಿದ್ದಾರೆ. ಸಲಿಂಗ ವಿವಾಹ ಸೇರಿದಂತೆ ಇತರ ಹಕ್ಕುಗಳ ಮೇಲೂ ಇದರ ಪರಿಣಾಮ ಬೀರಲಿದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ನ ಕರಡಿನ ಕುರಿತು ‘ಪೊಲಿಟಿಕೊ’ ಎಂಬ ಮಾಧ್ಯಮದಲ್ಲಿ ಪ್ರಕಟವಾಗಿರುವ ಸುದ್ದಿ ಅಧಿಕೃತವಾಗಿದೆ ಎಂದು ನ್ಯಾಯಾಲಯವು ದೃಢಪಡಿಸಿದೆ. ಆದರೆ, ಇದು ನ್ಯಾಯಮೂರ್ತಿಗಳ ಅಂತಿಮ ನಿರ್ಧಾರವನ್ನು ಪ್ರತಿನಿಧಿಸುವುದಿಲ್ಲ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.