ಸರ್ರೆ (ಕೆನಡಾ): ಕೆನಡಾದ ಸರ್ರೆಯಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್ ಮೇಲೆ ಗುರುವಾರ ಮತ್ತೆ ಗುಂಡಿನ ದಾಳಿ ನಡೆದಿದೆ.

ಗುರುವಾರ ಬೆಳಗಿನ ಜಾವ 3:45ರ ಸುಮಾರಿ ದಾಳಿ ನಡೆದಿದೆ. ಈ ಕುರಿತು ಸರ್ರೆ ಪೊಲೀಸ್ ಸೇವೆ (ಎಸ್ಪಿಎಸ್) ತನಿಖೆ ನಡೆಸುತ್ತಿದೆ ಎಂದು ‘ಸಿಟಿನ್ಯೂಸ್ ವ್ಯಾಂಕೋವರ್’ ವರದಿ ಮಾಡಿದೆ.

ದಾಳಿಯ ವೇಳೆ ಸಿಬ್ಬಂದಿ ಕೆಫೆಯೊಳಗೆ ಇದ್ದರು. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ಅದು ತಿಳಿಸಿದೆ.

ರೆಸ್ಟೋರೆಂಟ್ ಜುಲೈನಲ್ಲಿ ಆರಂಭವಾಗಿತ್ತು. ಜುಲೈ 10, ಆಗಸ್ಟ್ 7ರಂದು ಕೂಡ ರೆಸ್ಟೋರೆಂಟ್ ಮೇಲೆ ದಾಳಿಗಳು ನಡೆದಿದ್ದವು. ಈ ತಿಂಗಳ ಆರಂಭದಲ್ಲಿ ಮತ್ತೆ ರೆಸ್ಟೋರೆಂಟ್ ತೆರೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.