ಪೆಶಾವರ್: ಪಾಕಿಸ್ತಾನದ ತೆಹ್ರೀಕ್–ಇ–ಇನ್ಸಾಫ್ನ ಅಭ್ಯರ್ಥಿ ಸುಹೈಲ್ ಆಫ್ರಿದಿ ಅವರನ್ನು ಖೈಬರ್ ಪಖ್ತುಂಖ್ವಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.

ವಿರೋಧ ಪಕ್ಷಗಳ ಸಭಾತ್ಯಾಗದ ಹೊರತಾಗಿಯೂ ಸ್ಪೀಕರ್ ಬಾಬರ್ ಸಲೀಂ ಅವರು ಮತದಾನ ಪ್ರಕ್ರಿಯೆ ನಡೆಸಿದರು.

ಈ ವೇಳೆ ಆಫ್ರಿದಿ ಅವರಿಗೆ 145ರ ಮತಗಳ ಪೈಕಿ 90 ಮತಗಳು ಸಿಕ್ಕವು. ಪ್ರತಿಸ್ಪರ್ಧಿ ಜಮಾಅತ್ ಉಲೇಮಾ–ಇ–ಇಸ್ಲಾಂ, ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷ, ಪಾಕಿಸ್ತಾನ ಪೀಪಲ್ಸ್ ಪಕ್ಷದ ಅಭ್ಯರ್ಥಿಗಳು ಯಾವುದೇ ಮತಗಳನ್ನು ಪಡೆಯಲು ವಿಫಲರಾದರು.

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಆಫ್ರಿದಿ, ‘ಇಮ್ರಾನ್ ಖಾನ್ ಅವರು ಯಾವುದೇ ರಾಜಕೀಯ ಸಂಬಂಧ ಹೊಂದಿರದ ಮಧ್ಯಮ ವರ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ನನ್ನ ಹೆಸರಿನ ಮುಂದೆ ಭುಟ್ಟೋ, ಜರ್ದಾರಿ, ಷರೀಫ್ ಹೆಸರು ಸೇರಿಕೊಂಡಿಲ್ಲ’ ಎಂದು ಕುಟುಂಬ ರಾಜಕಾರಣದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.