ಸಿಯೋಲ್: ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿ ಕಿಮ್ ಜಾಂಗ್ ಉನ್ ಅವರನ್ನು ಮರು ಆಯ್ಕೆ ಮಾಡಲಾಗಿದೆ.

ಐದು ವರ್ಷಗಳಿಗೊಮ್ಮೆ ನಡೆಯುವ ವರ್ಕರ್ಸ್ ಪಾರ್ಟಿಯ ಬೃಹತ್ ಸಮಾವೇಶದಲ್ಲಿ ದೇಶದ ಪರಮಾಣು ಶಕ್ತಿಯನ್ನು ಬಲಪಡಿಸುವ ಉದ್ದೇಶಕ್ಕಾಗಿ ಕಿಮ್ ಅವರನ್ನು ಮರು ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮ ಕೆಸಿಎನ್ಎ ವರದಿ ಮಾಡಿದೆ.

ಕಿಮ್ ಅವರು ದೇಶದ ಪ್ರತಿಷ್ಠೆ ಹೆಚ್ಚಿಸುವ ಮೂಲಕ ಮಿಲಿಟರಿ, ಪರಮಾಣು ಶಕ್ತಿಯನ್ನು ಬಲಪಡಿಸಿದ್ದಾರೆ. ಕ್ರಾಂತಿಕಾರಿ ಹೋರಾಟಕ್ಕೆ ಅನುಕೂಲಕರವಾದ ಅಂತರರಾಷ್ಟ್ರೀಯ ವಾತಾವರಣ ಸೃಷ್ಟಿಸಿದ್ದಾರೆ ಎಂದು ಸಮಾವೇಶದಲ್ಲಿ ಶ್ಲಾಘಿಸಲಾಗಿದೆ.

ಕಿಮ್ ನಾಯಕತ್ವದಲ್ಲಿ ಉತ್ತರ ಕೊರಿಯಾದ ಪರಮಾಣು ಪಡೆಗಳನ್ನು ಆಮೂಲಾಗ್ರವಾಗಿ ಬಲಪಡಿಸಲಾಗಿದೆ. ಪಕ್ಷದ ಸಭೆಯಲ್ಲಿ ಕೇಂದ್ರ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ಕೆಲವು ನಿಯಮಗಳ ಪರಿಷ್ಕರಣೆಗೂ ಒಪ್ಪಿಗೆ ಸೂಚಿಸಲಾಗಿದೆ. ಈ ಕುರಿತ ವಿವರಗಳನ್ನು ಬಹಿರಂಗಪಡಿಸಿಲ್ಲ.

ಸದ್ಯ ನಡೆಯುತ್ತಿರುವ ವರ್ಕರ್ಸ್ ಪಾರ್ಟಿ ಸಮಾವೇಶದ ಬಗ್ಗೆ ಆ ದೇಶದ ಒಳಗೆ ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಕುತೂಹಲ ಮೂಡಿದೆ. ದೇಶವನ್ನು ಆಳುತ್ತಿರುವ ಕಿಮ್ ಜಾಂಗ್ ಉನ್ ಅವರ ಮುಂದಿನ ಆದ್ಯತೆಗಳು, ಸೇನೆ, ವಿದೇಶಾಂಗ ನೀತಿ, ಆರ್ಥಿಕತೆ, ಪ್ರಮುಖ ಅಧಿಕಾರಿಗಳ ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಅದಕ್ಕಿಂತ ಹೆಚ್ಚಿಗೆ ಅಂದು ಕಿಮ್ ಜಾಂಗ್ ಉನ್ ಅವರ ಉತ್ತರಾಧಿಕಾರಿ ಯಾರು ಎನ್ನುವ ಬಗ್ಗೆಯೂ ಘೋಷಣೆ ಹೊರಬೀಳಬಹುದು ಎನ್ನುವ ಕಾರಣಕ್ಕೆ ಅದರ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.
.ವಿದೇಶ ವಿದ್ಯಮಾನ | ಸರ್ವಾಧಿಕಾರಿ ನಾಡಿನಲ್ಲಿ ಉತ್ತರಾಧಿಕಾರಿ ಕುತೂಹಲ.North Korea: ಉತ್ತರಾಧಿಕಾರಿಯಾಗಿ 13 ವರ್ಷದ ಮಗಳನ್ನು ನೇಮಕ ಮಾಡಿದ ಕಿಮ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.