ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ಯಾಧುನಿಕ 'ಸೂಸೈಡ್ ಡ್ರೋನ್' ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

Published : 26 ಆಗಸ್ಟ್ 2024, 5:19 IST
Last Updated : 26 ಆಗಸ್ಟ್ 2024, 5:19 IST
ಫಾಲೋ ಮಾಡಿ
Comments

ಸೋಲ್: ಇಸ್ರೇಲ್ ಮತ್ತು ಹಮಾಸ್, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವ ಬೆನ್ನಲ್ಲೇ ಉತ್ತರ ಕೊರಿಯಾವು ತನ್ನ ಮತ್ತೊಂದು ಅಸ್ತ್ರದ ಪರೀಕ್ಷೆ ಮೂಲಕ ಆತಂಕ ಮೂಡಿಸಿದೆ.

ಉತ್ತರ ಕೊರಿಯಾವು ಸೋಮವಾರ ಅತ್ಯಾಧುನಿಕ ಸೂಸೈಡ್ ಡ್ರೋನ್‌ಗಳ ಪರೀಕ್ಷೆ ನಡೆಸಿದೆ. ಅಧ್ಯಕ್ಷ ಕಿಮ್ ಜಾಂಗ್ ಉನ್, ಖುದ್ದು ಹಾಜರಿದ್ದು ಅದರ ಮೇಲ್ವಿಚಾರಣೆ ಕೈಗೊಂಡರು ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈ ಡ್ರೋನ್ ತಂತ್ರಜ್ಞಾನವನ್ನು ರಷ್ಯಾದಿಂದ ಪಡೆದಿರಬಹುದಾದ ಸಾಧ್ಯತೆ ಇದೆ ಎಂದು ಪರಿಣಿತರು ತಿಳಿಸಿದ್ದಾರೆ.

ಆಕರ್ಷಕ ಟೋಪಿ ಹಾಕಿಕೊಂಡು, ಅತ್ಯಾಧುನಿಕ ಬೈನಾಕ್ಯುಲರ್ ಹಿಡಿದು ಡ್ರೋನ್ ಗುರಿ ಬೇಧಿಸುವುದನ್ನು ಕಿಮ್ ವೀಕ್ಷಿಸಿದರು ಎಂದು ವರದಿ ತಿಳಿಸಿದೆ.

ಕಾರ್ಯತಂತ್ರದ ವಿಚಕ್ಷಣ ಮತ್ತು ಬಹುಪಯೋಗಿ ಡ್ರೋನ್‌ಗಳ ಜೊತೆಗೆ‘ಮತ್ತಷ್ಟು ಸೂಸೈಡ್ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಅವಶ್ಯಕ’ಎಂದು ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಕೋರಿಯಾದ ಕೇಂದ್ರೀಯ ಸುದ್ದಿ ಸಂಸ್ಥೆ(ಕಿಸಿಎನ್‌ಎ) ಹೇಳಿದೆ.

ಶತ್ರುಗಳನ್ನು ಹೊಡೆದುರುಳಿಸುವ ಉದ್ದೇಶದಿಂದ ಮಾನವ ರಹಿತ ಸ್ಫೋಟಕ ಕೊಂಡೊಯ್ಯಬಲ್ಲ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಅಣ್ವಸ್ತ್ರಗಳ ಬಲ ಹೊಂದಿರುವ ಉತ್ತರ ಕೊರಿಯಾ, ಭೂಪ್ರದೇಶ ಮತ್ತು ಸಮುದ್ರ ವಲಯದಲ್ಲಿ ಯಾವುದೇ ಶತ್ರುಗಳನ್ನು ಹೊಡೆದುರುಳಿಸಲು ಶಕ್ತಿಶಾಲಿ ಡ್ರೋನ್‌ಗಳ ಸಂಗ್ರಹದಲ್ಲಿ ತೊಡಗಿದೆ ಎಂದು ಕೆಸಿಎನ್‌ಎ ವರದಿ ಮಾಡಿದೆ.

ಆಗಸ್ಟ್ 24ರಂದು ಉತ್ತರ ಕೊರಿಯಾ ಡ್ರೋನ್‌ಗಳ ಪರೀಕ್ಷೆ ನಡೆಸಿದ್ದು,‘ವಿವಿಧ ಮಾರ್ಗಗಳಿಂದ ಉಡಾವಣೆ ಬಳಿಕವೂ ಡ್ರೋನ್‌ಗಳು ನಿಗದಿತ ಗುರಿಯನ್ನು ಪತ್ತೆ ಮಾಡಿ ಬೇಧಿಸಿವೆ’ಎಂದೂ ಅದು ತಿಳಿಸಿದೆ.

ಡ್ರೋನ್ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ ಬಳಸುವಲ್ಲಿಯೂ ನಮ್ಮ ದೇಶ ಸಕ್ರಿಯವಾಗಿ ತೊಡಗಲಿದೆ ಎಂದೂ ಕಿಮ್ ತಿಳಿಸಿದ್ದಾರೆ.

ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿರುವ ಉತ್ತರ ಕೊರಿಯಾದ ಸೂಸೈಡ್‌ ಡ್ರೋನ್‌ಗಳ ಚಿತ್ರಗಳನ್ನು ಗಮನಿಸಿದರೆ, ಅವುಗಳು ಇಸ್ರೇಲ್ ಅಭಿವೃದ್ಧಿಪಡಿಸಿರುವ ‘ಎಚ್‌ಎಆರ್‌ಒಪಿ’ಸೂಸೈಡ್‌ ಡ್ರೋನ್‌ಗಳನ್ನು ಹೋಲುತ್ತವೆ ಎಂದು ಪರಿಣಿತರು ತಿಳಿಸಿದ್ಧಾರೆ. ಈ ತಂತ್ರಜ್ಞಾನವನ್ನು ರಷ್ಯಾದಿಂದ ಪಡೆದಿರಬಹುದು ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT