ನ್ಯೂಯಾರ್ಕ್: ಒರಾಕಲ್ ಸಹ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ದೀರ್ಘಕಾಲದಿಂದ ಇಲಾನ್ ಮಸ್ಕ್ ಹೊಂದಿದ್ದ ಈ ಖ್ಯಾತಿಯನ್ನು ಲ್ಯಾರಿ ಕಸಿದುಕೊಂಡಿದ್ದಾರೆ ಎಂದು ವೆಲ್ತ್ ಟ್ರ್ಯಾಕರ್ ಬ್ಲೂಮ್ಬರ್ಗ್ ಹೇಳಿದೆ.

ಬುಧವಾರ ಬೆಳಿಗ್ಗೆ ಅವರ ಸಾಫ್ಟ್ವೇರ್ ದೈತ್ಯ ಕಂಪನಿಯ ಷೇರುಗಳು ಕೆಲವೇ ನಿಮಿಷಗಳ ವಹಿವಾಟಿನಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಏರಿಕೆ ಕಂಡವು ಎಂದು ವರದಿ ತಿಳಿಸಿದೆ.

81 ವರ್ಷದ ಎಲಿಸನ್ ಈಗ 393 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ ಎಂದು ಬ್ಲೂಮ್ಬರ್ಗ್ ಹೇಳಿದೆ. ಇಲಾನ್ ಮಸ್ಕ್ ಸಂಪತ್ತಿನ ಮೌಲ್ಯ 385 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಗಳಿಸಿದ್ದ ಮಸ್ಕ್ ಅವರಿಗಿಂತ ಎಲಿಸನ್ ಹಲವು ಶತಕೋಟಿ ಡಾಲರ್ ಹೆಚ್ಚು ಶ್ರೀಮಂತರಾಗಿದ್ದಾರೆ.

ಒರಾಕಲ್ ಷೇರುಗಳ ಮೌಲ್ಯ ಏರುಮುಖವಾಗಿದ್ದರೆ, ಟೆಸ್ಲಾ ಷೇರು ಮೌಲ್ಯ ಕುಸಿಯುತ್ತಾ ಸಾಗಿವೆ. ಈ ವರ್ಷ ಮಂಗಳವಾರದ ವೇಳೆಗೆ 14 ಪ್ರತಿಶತದಷ್ಟು ಕುಸಿದಿವೆ.

ಕೃತಕ-ಬುದ್ಧಿಮತ್ತೆಯ ಓಟವು ಒರಾಕಲ್ ಆದಾಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ.

ಆದರೆ, ಮತ್ತೊಂದು ಸುದ್ದಿ ಸಂಸ್ಥೆ ಫೋರ್ಬ್ಸ್, ಈಗಲೂ ಮಸ್ಕ್ ಅತ್ಯಂತ ಶ್ರೀಮಂತ ವ್ಯಕ್ತಿ ಎಂದಿದೆ. ಅವರ ಸಂಪತ್ತಿನ ಮೌಲ್ಯ 439 ಬಿಲಿಯನ್ ಅಮೆರಿಕ ಡಾಲರ್ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.